ಅದ್ದೂರಿ ದಸರೆಗೆ ಮೊದಲ ಹೆಜ್ಜೆ: ಆಗಸ್ಟ್ 7ಕ್ಕೆ ಗಜ ಪಯಣ

file photo
Promotion

ಮೈಸೂರು, ಆಗಸ್ಟ್ 05, 2022 (www.justkannada.in): ಈ ಬಾರಿ ಅದ್ಧೂರಿಯಾಗಿ ನಾಡಹಬ್ಬ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮುಂಚಿತವಾಗಿಯೇ ಗಜಪಡೆ ಅರಮನೆ ನಗರಿಗೆ ಆಗಮಿಸಲಿದೆ.

ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ. ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ.

ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರ ವಲಯದಲ್ಲಿರುವ ನಾಗಾಪುರ ಸಣ್ಣಗ್ರಾಮದ ಸಮೀಪವೀರುವ ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ 9.01ರಿಂದ 9.35ರ ಮಧ್ಯದ ಶುಭ ಕನ್ಯಾ ಲಗ್ನದಲ್ಲಿ ಗಜಪಡೆಗಳ ಪಯಣ ಶುರುವಾಗಲಿದೆ.

ಮೈಸೂರು ದಸರಾ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಆನೆಗಳ ಪಯಣ ಸ್ವಲ್ಪ ದೂರದವರೆಗೆ ಮೆರವಣಿಗೆ ಮೂಲಕ ಸಾಗಲಿದೆ. ನಂತರ ವೀರನಹೊಸಹಳ್ಳಿಯಿಂದ ಮೈಸೂರಿಗೆ ಲಾರಿಗಳ ಮೂಲಕ ಆನೆಗಳನ್ನು ಕರೆತರಲಾಗುತ್ತದೆ.