ಮೇ. 23 ರಂದು ಮತ ಎಣಿಕೆ : 3 ಗಂಟೆ ತಡವಾಗಿ ಪ್ರಕಟವಾಗಲಿದೆ ಅಧಿಕೃತ ಫಲಿತಾಂಶ..!

 

ಬೆಂಗಳೂರು, ಮೇ.21, 2019 : (www.justkannada.in news ) : ಲೋಕಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳಂತು ನಮ್ಮಲ್ಲೇ ಮೊದಲ ಫಲಿತಾಂಶ ಎಂದು ಸ್ಪರ್ಧೆಗೆ ಬಿದ್ದವರಂತೆ ಪ್ರೊಮೋ ಓಡಿಸುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ. ಚುನಾವಣಾ ಆಯೋಗದ ಪ್ರಕಾರವೇ ಮತ ಎಣಿಕೆಯ ಮೊದಲ ಫಲಿತಾಂಶ ಅಧಿಕೃತವಾಗಿ ಲಭಿಸುವುದು ಮಧ್ಯಾಹ್ನ 3 ಗಂಟೆಗೆ…!

ಹೌದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಈ ಮೊದಲು ಗುರುವಾರ ಮಧ್ಯಾಹ್ನ 12 ಗಂಟೆಗೆ ಮೊದಲ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಈ ಸಮಯ ಸುಮಾರು 3 ತಾಸುಗಳಷ್ಟು ವಿಳಂಬವಾಗಲಿದೆ. ಅಂದ್ರೆ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಬೇಕಾಗಿದ್ದ ಫಲಿತಾಂಶ ಮಧ್ಯಾಹ್ನ 3 ಗಂಟೆ ವೇಳೆಗೆ ಅಧಿಕೃತವಾಗಿ ಪ್ರಕಟವಾಗಲಿದೆ.

ತಡವೇಕೆ :

ಈ ಬಾರಿ ಪ್ರತಿ ಬೂತ್ ಗೂ ವಿವಿ ಪ್ಯಾಟ್ ಅಳವಡಿಸಲಾಗಿದ್ದು, ಇದರ ಮತ ಸಂಖ್ಯೆಯ ಎಣಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಹಾಗಾಗಿ ನಿಗಧಿತ ಸಮಯಕ್ಕಿಂತ ಹೆಚ್ಚು ಸಮಯ ಚನಾವಣಾ ಫಲಿತಾಂಶದ ಪ್ರಕಟಣೆಗೆ ಹಿಡಿಯಲಿದೆ ಎಂದು ಕಾರಣ ನೀಡಲಾಗಿದೆ. ಜತೆಗೆ ಸಂಜೆ 7 ರ ಒಳಗೆ ಮತ ಎಣಿಕೆಯ ಸಂಪೂರ್ಣ ಫಲಿತಾಂಶ ಪ್ರಕಟಿಸುವ ಭರವಸೆಯನ್ನು ಚುನಾವಣಾ ಆಯೋಗ ನೀಡಿದೆ.

key words : First official counting results may be delayed by 3 hours

ENGLISH SUMMARY :

First official counting results may be delayed by 3 hours because of VVPAT counting said CEO Karnataka Sanjeev Kumar, earlier we would get first results by 12 Noon but this time because of VVPAT counting we are expecting the first result at 3 PM, but we have made all the arrangements to complete the counting process of all 28 seats before 7 PM he said.