ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್…

ಬೆಂಗಳೂರು,ಫೆಬ್ರವರಿ,12,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ಧು ಕೇಳಿದ್ದು, ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ನಡೆಸಿದೆ.jk

ವಿದ್ಯಾರಣ್ಯಪುರಂನ  ಕಳತ್ತೂರು ಫಾರ್ಮ್ ಬಳಿ ಈ ಘಟನೆ ನಡೆದಿದೆ. ದರೋಡೆಕೋರ ಇಮ್ರಾನ್ ಪಾಷಾ ಮೇಲೆ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಬಂಧಿತ ಇಮ್ರಾನ್ ಪಾಷಾ ನಿನ್ನೆ ಬಂಧಿಸಲಾಗಿದ್ದ ದರೋಡೆಕೋರ ಶಬರೀಶ್ ಸಹಚರನಾಗಿದ್ದಾನೆ. Firing- police -over –gangster-bangalore

ಶಬರೀಶ್ ಮತ್ತವನ ಗ್ಯಾಂಗ್ ಬೈಕ್ ಕಳ್ಳತನದಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಶಬರೀಶ್ ಮೇಲೆ ಫೈರಿಂಗ್ ಮಾಡಿ ಆತನನ್ನ ಬಂಧಿಸಲಾಗಿತ್ತು. ಇದೀಗ ಆತನ ಸಹಚರ ಇಮ್ರಾನ್ ಪಾಷಾನನ್ನ ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಇಮ್ರಾನ್ ಪಾಷಾ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ಇಮ್ರಾನ್ ಪಾಷಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.

Key words: Firing- police -over –gangster-bangalore