ಮೂರು ದಿನಗಳ ಸಲಹೆ ಸೂಚನೆ ಪರಿಗಣಿಸಿ ಮಾಧ್ಯಮಗಳ ನಿರ್ಬಂಧದ ಬಗ್ಗೆ ಅಂತಿಮ ತೀರ್ಮಾನ- ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ….

ಬೆಂಗಳೂರು,ಅ,10,2019(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ಕಲಾಪಕ್ಕೆ ಮಾಧ್ಯಮಗಳಿಗೆ ನಿರ್ಬಂಧವನ್ನು ಪ್ರಾಯೋಗಿಕವಾಗಿ ಮೂರು ದಿನಗಳು ನೋಡುತ್ತೇವೆ. ಮೂರು ದಿನಗಳ ಬರುವ ಸಲಹೆ ಸೂಚನೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ತಿಳಿಸಿದರು.

ವಿಧಾನಸೌಧದಲ್ಲಿ ಈ ಕುರಿತು ಇಂದು ಮಾತನಾಡಿದ ಸ್ಪೀಕರ್ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ಇಂದಿನಿಂದ ಅಧಿವೇಶನ ಆರಂಭವಾಗುತ್ತಿದೆ. ರಾಜ್ಯದ ಅಭಿವೃದ್ಧಿ ಬೆಳವಣಿಗೆಗೆ ಸದನದಲ್ಲಿ ಚರ್ಚೆ ಆಗಬೇಕು ಅಂತ ಅಪೇಕ್ಷೆಯಿದೆ. ಲೋಕಸಭೆ ಮತ್ತು ರಾಜ್ಯಸಭೆಯ ವ್ಯವಸ್ಥೆಯನ್ನೇ ವಿಧಾನಸಭೆಯಲ್ಲೂ ಮಾಡಿದ್ದೇನೆ. ಮಾಧ್ಯಮದವರಿಗೆ ಎಲ್ಲ ಮಾಹಿತಿಯೂ ಸಿಗುತ್ತೆ. ಯಾವುದನ್ನು ನಾವು ಮುಚ್ಚಿಡುವುದಿಲ್ಲ ಎಂದು ಹೇಳಿದರು.

ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಚಾರ, ಇದು ಅನೇಕ ವರ್ಷಗಳಿಂದ ಚರ್ಚೆ ನಡೆದಿತ್ತು. ಸ್ಪೀಕರ್ ಸಮ್ಮೇಳನದಲ್ಲಿ ನಿರಂತರವಾಗಿ ಮಾಧ್ಯಮಗಳ ನಿರ್ಬಂಧ ಬಗ್ಗೆ ಚರ್ಚೆಯಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಹಾಗೇಯೇ ನಾವು ಇಲ್ಲಿ ವ್ಯವಸ್ಥೆ ಮಾಡುತ್ತೇವೆ. ಮಾಧ್ಯಮಗಳ ನಿರ್ಬಂಧ ಪ್ರಾಯೋಗಿಕವಾಗಿ ಮೂರು ದಿನಗಳು ನೋಡುತ್ತೇವೆ. ಮುಂದಿನ ದಿನಗಳಲ್ಲಿ ಈ ನಿರ್ಧಾರ ಮುಂದುವರೆಸಬೇಕಾ ಅಥವಾ ಹೇಗೆ ಅಂತ ಮುಂದೆ ನೋಡೋಣ. ಮೂರು ದಿನಗಳ ಬರುವ ಸಲಹೆ ಸೂಚನೆ ಪರಿಗಣಿಸಿ ಮಾಧ್ಯಮಗಳ ನಿರ್ಬಂಧ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ತಿಳಿಸಿದರು.

Key words: Final decision –media- restriction –session-speaker – Vishweshwara hedge kageri