ಸೀಮಾ ಅವಾರ್ಡ್ ಕಾರ್ಯಕ್ರಮಕ್ಕಾಗಿ ದುಬೈನತ್ತ ಸಿನಿತಾರೆಯರ ದಂಡು!

Promotion

ಬೆಂಗಳೂರು, ಸೆಪ್ಟೆಂಬರ್ 15, 2023 (www.justkannada.in): ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಈ ಬಾರಿ  ದುಬೈನಲ್ಲಿ ನಡೆಯಲಿದ್ದು ಈಗಾಗಲೇ ತಾರೆಗಳ ದಂಡು ದುಬೈನತ್ತ ದಾಂಗುಡಿ ಇಡುತ್ತಿದೆ.

ನಮ್ಮ ಸೌತ್ ಚಿತ್ರರಂಗದ ಹಲವು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿವೆ. ಆದರೆ ಯಾರಿಗೆ ಯಾವ್ಯಾವ ಪ್ರಶಸ್ತಿ ಲಭಿಸುತ್ತದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲು ತಯಾರಕರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಶೋ ಯಶಸ್ವಿಯಾಗುತ್ತದೆ ಎಂಬ ಉತ್ಸಾಹದಲ್ಲಿದ್ದಾರೆ.

ಇಂದು ಹಾಗೂ ನಾಳೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಹಲವಾರು ಚಿತ್ರಗಳು ನಾನಾ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.