ನದಿಪಾತ್ರದ ಒತ್ತುವರಿ ಬಗ್ಗೆ ಸಮೀಕ್ಷೆ: ಸಿಎಂ ಜತೆ ಚರ್ಚಿಸಿ ಸೂಕ್ತ ಯೋಜನೆ – ಸಚಿವ ರಮೇಶ್ ಜಾರಕಿಹೊಳಿ 

kannada t-shirts

ಬೆಳಗಾವಿ,ಸೆಪ್ಟೆಂಬರ್,19,2020(www.justkannada.in) : ಜಲಾಶಯಗಳಲ್ಲಿ ಹೂಳು ತುಂಬಲು ಹಾಗೂ ನೀರು ಸಂಗ್ರಹ ಪ್ರಮಾಣ ಕಡಿಮೆಗೆ ಒತ್ತುವರಿಯೇ ಕಾರಣ.ನದಿಪಾತ್ರದ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

jk-logo-justkannada-logo

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶನಿವಾರ ನದಿ ಪಾತ್ರದ ತೆರವು ಕುರಿತ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರದ ಒತ್ತುವರಿ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುವುದು. ಮುಂಚೆ ಪ್ರವಾಹ ಬಂದಾಗ ಮೂರೇ ತಾಸಿನಲ್ಲಿ ನೀರು ಇಳಿಮುಖವಾಗುತ್ತಿತ್ತು. ಆದರೆ, ಇಂದು ಜಲಾಶಯಗಳಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ಅಗತ್ಯತೆ ಆಧರಿಸಿ ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರದ ನೆರವು ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ill-sludge-reservoirs-reducing-water-storage-volume-Reason-emphasis-Minister-Ramesh Zarakiholi

ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಾಥಮಿಕ ಸಮೀಕ್ಷೆ  ನಡೆಸಿದ್ದಾರೆ. ಸಮಗ್ರ ಸಮೀಕ್ಷೆ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಶಾಶ್ವತ ಪರಿಹಾರ ರೂಪಿಸಲಾಗುವುದು. ನದಿಪಾತ್ರದ ಅತಿಕ್ರಮಣ ಆಗಿರುವುದು ಸತ್ಯ. ಒತ್ತುವರಿ ತೆರವುಗೊಳಿಸಿದರೆ ಪ್ರವಾಹ ನಿಯಂತ್ರಣ ಸಾಧ್ಯ ಎಂದು ಹೇಳಿದರು.

ಕಳಸಾ-ಬಂಡೂರಿ ಕುರಿತು ಸಿಎಂ ಕೂಡ ಚರ್ಚೆ ನಡೆಸಿದ್ದಾರೆ.  ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು. ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ill-sludge-reservoirs-reducing-water-storage-volume-Reason-emphasis-Minister-Ramesh Zarakiholi

key words : Fill-sludge-reservoirs-reducing-water-storage-volume-Reason-emphasis-Minister-Ramesh Zarakiholi

website developers in mysore