“ಐವತ್ತು, ನೂರು ವರ್ಷ ಪೂರೈಸಿದ ನಿಯತಕಾಲಿಕೆಗಳ ಸಂಭ್ರಮಾಚರಣೆಗೆ ವಿಶ್ವವಿದ್ಯಾನಿಲಯ ಬದ್ಧ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,28,2021(www.justkannada.in) : ಮೈಸೂರು ವಿವಿಯ ನಿಯತಕಾಲಿಕೆಗಳಾದ “ಪ್ರಬುದ್ಧ ಕರ್ಣಾಟಕ” ನೂರು ವರ್ಷ ಹಾಗೂ “ಮಾನವಿಕ ಕರ್ಣಾಟಕ” ಮತ್ತು “ವಿಜ್ಞಾನ ಕರ್ಣಾಟಕಗಳು” ಐವತ್ತು ವರ್ಷ ಪೂರೈಸಿದ್ದು, ಕನ್ನಡ ನಿಯತಕಾಲಿಕೆಗಳ ಲೋಕದಲ್ಲಿ ಇದೊಂದು ವಿಶೇಷ ಸಂದರ್ಭವಾಗಿದೆ. ಈ ಮೂರು ನಿಯತಕಾಲಿಕೆಗಳ ಸಂಭ್ರಮಾಚರಣೆಯನ್ನು ಸೂಕ್ತ ರೀತಿಯಲ್ಲಿ ಆಚರಿಸಲು ವಿಶ್ವವಿದ್ಯಾನಿಲಯ ಬದ್ಧವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.jkಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ವತಿಯಿಂದ ಗುರುವಾರ “ಪ್ರಚಾರೋಪನ್ಯಾಸ ಮಾಲೆ ಹಾಗೂ ಪ್ರಬುದ್ಧ ಕರ್ಣಾಟಕ ಶತಮಾನೋತ್ಸವ, ಮಾನವಿಕ ಮತ್ತು ವಿಜ್ಞಾನ ಕರ್ಣಾಟಕ ಸುವರ್ಣ ಮಹೋತ್ಸವ ಆಚರಣೆ”ಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿದರು.

ವಿದ್ವಾಂಸರಾದ ಪ್ರೊ.ವೆಂಕಟಾಚಲಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಈ ನಿಯತಕಾಲಿಕೆಗಳ ನೂರು ಹಾಗೂ ಐವತ್ತನೆಯ ವರ್ಷದ ಆಚರಣೆ ಸಂಬಂಧ ಪ್ರೊ.ತಳವಾರ ಅವರಿಗೆ ಶೀಘ್ರವಾಗಿ ಕಾರ್ಯಯೋಜನೆ ರೂಪಿಸಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲು ಸೂಚಿಸುತ್ತೇನೆ ಎಂದರು.

ಕನ್ನಡ ಸಾರಸ್ವತ ಲೋಕದಲ್ಲಿ ಪ್ರಬುದ್ಧ ಕರ್ಣಾಟಕಕ್ಕೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡದ ಲೇಖಕರ ಚಿಂತನೆಗಳು ಈ ಪತ್ರಿಕೆಯ ಉದ್ದಕ್ಕೂ ಹರಿದು ಬಂದಿದೆ. ಪ್ರಬುದ್ಧ ಕರ್ಣಾಟಕ ನಿಯತಕಾಲಿಕೆಯಲ್ಲಿ ಒಂದು ಲೇಖನ ಪ್ರಕಟವಾದರೆ ಅವರು ಕನ್ನಡದ ಮಹತ್ವದ ಲೇಖಕರಾಗಿ ಹೊರಹೊಮ್ಮುತ್ತಾರೆ ಎಂಬ ಕಾಲವೊಂದಿತ್ತು ಎಂದು ಸ್ಮರಿಸಿದರು.

“ಪ್ರಚಾರೋಪನ್ಯಾಸ ಮಾಲೆಗೆ ಮೈಸೂರು ಎಕ್ಸ್ ಪೆರಿಮೆಂಟ್ ಗೌರವ”Fifty-One hundred years-Fulfilled-magazines- celebrate-University-Committed-Chancellor-Prof.G.Hemant Kumarಪ್ರಸಾರಾಂಗವು ನಿರಂತರವಾಗಿ ಏರ್ಪಡಿಸಿಕೊಂಡು ಬರುತ್ತಿರುವ ಪ್ರಚಾರೋಪನ್ಯಾಸ ಮಾಲೆಗೂ ಒಂದು ಸುಧೀರ್ಘ ಇತಿಹಾಸವಿದೆ. ಲಂಡನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ನಮ್ಮ ವಿಶ್ವವಿದ್ಯಾನಿಲಯ ನಡೆಸಿಕೊಂಡು ಬರುತ್ತಿರುವ ಪ್ರಚಾರೋಪನ್ಯಾಸ ಮಾಲೆಗೆ ಮೈಸೂರು ಎಕ್ಸ್ ಪೆರಿಮೆಂಟ್ ಎಂದು ಶಿಕ್ಷಣ ತಜ್ಞರು ಗುರುತಿಸಿ ಗೌರವಿಸಿದ್ದಾರೆ. ಪ್ರಸಾರಾಂಗ ನಮ್ಮ ವಿಶ್ವವಿದ್ಯಾನಿಲಯದ ಹಿರಿಯ ಸಂಸ್ಥೆ ಮತ್ತು ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

“ಪ್ರಸಾರಾಂಗದಿಂದ ಪುಸ್ತಕಗಳ ಮಾರಾಟದ ಮೂಲಕ ವಿವಿಗೆ ಹಣ”

ಪ್ರಸಾರಾಂಗದ ಸಾಧನೆಗಳನ್ನು ನಾನು ಅಭಿನಂದಿಸುತ್ತೇನೆ. ಅದರ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ನೆರವನ್ನು ಪ್ರೋತ್ಸಾಹವನ್ನು ಒದಗಿಸುತ್ತೇನೆ. ಉಳಿದ, ಎಲ್ಲ ವಿಭಾಗಗಳು ವಿಶ್ವವಿದ್ಯಾನಿಲಯದಿಂದ ಧನಸಹಾಯ ಬಯಸಿದರೆ ಪ್ರಸಾರಾಂಗ ವಿಶ್ವವಿದ್ಯಾನಿಲಯಕ್ಕೆ ಪುಸ್ತಕಗಳ ಮಾರಾಟದ ಮೂಲಕ ಹಣ ತಂದುಕೊಡುತ್ತವೆ ಎಂದರು.

“ನಿಯತಕಾಲಿಕೆಗಳ ವರ್ಷಾಚರಣೆಗೆ ಲೇಖಕರ ಸಮಾವೇಶ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳ” Fifty-One hundred years-Fulfilled-magazines- celebrate-University-Committed-Chancellor-Prof.G.Hemant Kumarಪ್ರಸಾರಾಂಗವು 2800ಕ್ಕೂ ಅಧಿಕ ಕೃತಿಗಳನ್ನು ಹೊರತಂದಿದೆ. ರಾಜ್ಯದ ಯಾವ ವಿಶ್ವವಿದ್ಯಾನಿಲಯವು ಈ ರೀತಿಯ ಸಾಧನೆ ಮಾಡರಲಿಕ್ಕಿಲ್ಲ. ಈ ನಿಯತಕಾಲಿಕೆಗಳ ಐವತ್ತು ಹಾಗೂ ನೂರನೇ ವರ್ಷಾಚರಣೆಯ ನಿಮಿತ್ತ ಪ್ರಸಾರಾಂಗದ ನಿರ್ದೇಶಕ ಪ್ರೊ.ತಳವಾರ ಅವರು ಆಯೋಜಿಸಲು ನಿರ್ಧರಿಸಿರುವ ಲೇಖಕರ ಸಮಾವೇಶ ಹಾಗೂ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ವಿಶ್ವವಿದ್ಯಾನಿಲಯವು ಎಲ್ಲ ರೀತಿಯ ಸಹಕಾರ ಮಾಡಿಕೊಡುತ್ತದೆ ಎಂದು ಹೇಳಿದರು.

“ವಿಶ್ವವಿದ್ಯಾನಿಲಯದ ಪ್ರಗತಿ ತೃಪ್ತಿಕರ”

ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಮತ್ತು ಆಡಳಿತಾಂಗವು ವಿಶ್ವವಿದ್ಯಾನಿಲಯದ ಪ್ರಗತಿಯ ಆಧಾರಸ್ತಂಭಗಳಾಗಿವೆ. ಈ ಎಲ್ಲ ಅಂಗಗಳಲ್ಲಿ ಸಮತೋಲನತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಪ್ರಗತಿ ತೃಪ್ತಿಕರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿದ್ವಾಂಸ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರೀ ಮಾತನಾಡಿ, ಪ್ರಬುದ್ಧ ಕರ್ಣಾಟಕವು ಕನ್ನಡ ಭಾಷೆಯನ್ನು ಬೆಳೆಸುವುದರ ಜೊತೆಗೆ ಅನೇಕ ಬರಹಗಾರರಿಗೆ ಅವಕಾಶ ಒದಗಿಸಿತ್ತು. ಬಿಎಂಶ್ರೀ ಸೇರಿದಂತೆ ಅನೇಕರು ಇದರ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಆಧುನಿಕ ಕರ್ನಾಟಕದ ಚರಿತ್ರೆ ಎಂದರೆ ಪ್ರಬುದ್ಧ ಕರ್ನಾಟಕದ ಚರಿತ್ರೆFifty-One hundred years-Fulfilled-magazines- celebrate-University-Committed-Chancellor-Prof.G.Hemant Kumarಆಧುನಿಕ ಕರ್ನಾಟಕದ ಚರಿತ್ರೆ ಎಂದರೆ ಪ್ರಬುದ್ಧ ಕರ್ನಾಟಕದ ಚರಿತ್ರೆ ಎನ್ನಬಹುದು. ಪ್ರಬುದ್ಧ ಕರ್ಣಾಟಕದ ನವೋದಯಕ್ಕೆ ಈ ಪತ್ರಿಕೆಯೂ ಸಹಕಾರಿ ಎಂದು ದೇಜಗೌ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಲ ಕಾಲಕ್ಕೆ ಬದಲಾವಣೆಯಾಗಿದ್ದರೂ, ಆದರ್ಶ ಹಾಗೆಯೇ ಉಳಿಸಿಕೊಂಡು ಬಂದಿರುವುದು ವಿಶೇಷ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಆರ್.ಶಿವಪ್ಪ, ಶ್ರೀವೇದವ್ಯಾಸ ಯೋಗ ಫೌಂಡೇಶನ್ ಡಾ.ರಾಘವೇಂದ್ರ ಪೈ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ,  ಪ್ರಸಾರಾಂಗ ಕನ್ನಡ ನಿಯತಕಾಲಿಕೆಗಳ ಕಾರ್ಯನಿರ್ವಾಹಕ ಗೌರವ ಸಂಪಾದಕರಾದ ಡಾ.ಲಲಿತಾ, ಪ್ರಸಾರಾಂಗ ಸಹಾಯಕ ನಿರ್ದೇಶಕ ಡಾ.ಬಿ.ಎಸ್.ಅನಿಲ ಕುಮಾರ್ ಇತರರು ಉಪಸ್ಥಿತರಿದ್ದರು.

ENGLISH SUMMARY…

UoM committed to celebrate journals that have completed 50, 100 years: Prof. G. Hemanth Kumar
Mysuru, Jan. 28, 2021 (www.justkannada.in): “Journals titled Prabhudda Karnataka,” and “Manavika Karnataka” and “Vignana Karnataka,” published by the University of Mysore have completed 100 years respectively. It is a special occasion for the Kannada journals. The University of Mysore is committed to celebrating its success,” opined Prof. G. Hemanth Kumar, Vice-Chancellor.Fifty-One hundred years-Fulfilled-magazines- celebrate-University-Committed-Chancellor-Prof.G.Hemant Kumar
Presiding over a programme conducted by the Department of Broadcasting, the University of Mysore on Thursday, he explained that these journals that are being published under the guidance of Vidwan Prof. Venkatachalasastry have completed 100, and 50 years respectively. I have informed Prof. Talawar to prepare an action plan for its celebration and submit it soon, he said.
“A conference will be conducted as part of the celebration along with exhibition and sale of books published by various Universities across the state. Teaching, Research, Publishing, and Administration are the pillars of the progress of a University. All these Departments in our university are performing well. The progress of the University of Mysore is satisfactory compared to other universities in the state,” he added.
Keywords: University of Mysore/ Prof. G. Hemanth Kumar/ journals/ conference/ celebration

key words : Fifty-One hundred years-Fulfilled-magazines- celebrate-University-Committed-Chancellor-Prof.G.Hemant Kumar