ರಾಜ್ಯಕ್ಕೆ ರಸಗೊಬ್ಬರ ಪೂರೈಕೆ: ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಭರವಸೆ ನೀಡಿದ ಕೇಂದ್ರ ಸಚಿವ ಸದಾನಂದಗೌಡ..

kannada t-shirts

ನವದೆಹಲಿ,ಆಗಸ್ಟ್,27,2020(www.justkannada.in): ದೆಹಲಿಗೆ ಭೇಟಿ ನೀಡಿರುವ  ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರನ್ನು ಭೇಟಿಯಾಗಿ ರೈತರಿಗೆ ರಸಗೊಬ್ಬರ ಪೂರಕೆ ಬಗ್ಗೆ ಚರ್ಚಿಸಿದರು.fertilizer-supply-union-minister-dv-sadananda-gowda-agriculture-minister-bc-patil

ಈ ಬಾರಿ ಉತ್ತಮ ಮಳೆಯಾಗಿದ್ದು, ಅಲ್ಲದೇ ಕೋವಿಡ್‌ನಿಂದಾಗಿ  ಗ್ರಾಮೀಣ ಭಾಗದಲ್ಲಿ ಕೃಷಿಯೆಡೆಗೆ ರೈತಾಪಿವರ್ಗದ ಜೊತೆಗೆ ಯುವಜನತೆ ಕೃಷಿಗೆ ಹೆಚ್ಚು ಒತ್ತು ನೀಡಿರುವುದರಿಂದ ಈ ಬಾರಿ ಬಿತ್ತನೆಯೂ ಹೆಚ್ಚಾಗಿದೆ. ಆದ್ದರಿಂದ ಕೃಷಿಗೆ ಅಗತ್ಯವಾದ ರಸಗೊಬ್ಬರ ಹೆಚ್ಚಿನದಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗಲೀ ಯೂರಿಯಾದ ಕೊರತೆಯಾಗಲೀ ಆಗದಂತೆ ದಿಟ್ಟ ಹೆಜ್ಜೆಯಿಟ್ಟಿರುವ ಬಗ್ಗೆ ಕೃಷಿ ಸಚಿವ ಬಿಸಿ ಪಾಟೀಲ್ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಜತೆ ಚರ್ಚಿಸಿದರು. ಹಾಗೂ ನಕಲಿ ಬೀಜ ತಡೆ, ನಕಲಿ ರಾಸಾಯನಿಕ ಗೊಬ್ಬರ ಜಾಲವನ್ನು ಬೇಧಿಸುವಲ್ಲಿ ಕೃಷಿ ‌ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಕಲಿ ಬೀಜ ರಾಸಾಯನಿಕ ಗೊಬ್ಬರ ಹಾಗೂ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಅವರ ಪರವಾನಿಗೆ ರದ್ದುಗೊಳಿಸುವ ಬಗ್ಗೆಯೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರಸಚಿವರ ಜೊತೆ ಮಾಹಿತಿ ಹಂಚಿಕೊಂಡರು. ಕೃಷಿ ಸಚಿವರ ಈ ದಿಟ್ಟ ಕ್ರಮ ಹಾಗೂ ರೈತರ ಬಗೆಗಿನ ಕಾಳಜಿಗೆ ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.fertilizer-supply-union-minister-dv-sadananda-gowda-agriculture-minister-bc-patil

ಈ ಸಂದರ್ಭದಲ್ಲಿ ಕೇಂದ್ರಸರ್ಕಾರ ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲೂ ಸಹ ರಸಗೊಬ್ಬರದ ಕೊರತೆಯಾಗುವುದಿಲ್ಲವೆಂದು‌ ಡಿ.ವಿ.ಸದಾನಂದಗೌಡ ಬಿ.ಸಿ.ಪಾಟೀಲರಿಗೆ ಭರವಸೆ ನೀಡಿದರು. ಇದರೊಂದಿಗೆ ಕರ್ನಾಟಕಕ್ಕೆ ಅವಶ್ಯಕ ಗೊಬ್ಬರವನ್ನು ಪೂರೈಸಲು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅಧಿಕಾರಿಗಳಿಗೆ ಸೂಚಿಸಿದರು.

Key words: Fertilizer- supply-Union Minister-DV  Sadananda Gowda -Agriculture Minister- BC Patil

website developers in mysore