ಫೆ.8 ರಿಂದ ಭೌತಿಕ ಹಾಗೂ ಆನ್ ಲೈನ್ ಮೂಲಕ ‘ರಾಷ್ಟ್ರೀಯ ತೋಟಗಾರಿಕೆ ಮೇಳ’…..

ಬೆಂಗಳೂರು,ಜನವರಿ,8,2021(www.justkannada.in): ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಫೆಬ್ರವರಿ 8 ರಿಂದ 12 ರವರೆಗೆ ನಡೆಸುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳವು ಈ ಬಾರಿ ಭೌತಿಕ ಹಾಗೂ ಆನ್ಲೈನ್ ಮೂಲಕ ನಡೆಯಲಿದೆ. ಈ ಬಾರಿ ಈ ಮೇಳದಲ್ಲಿ ಭಾಗವಹಿಸಲು ರೈತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸುಮಾರು 30000 ರೈತರು ಮಾತ್ರ ಭೌತಿಕವಾಗಿ ಪಾಲ್ಗೊಳ್ಳಲು ಅವಕಾಶ  ಕಲ್ಪಿಸಲಾಗಿದೆ. ಹಾಗೆಯೇ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರು ಆನ್ಲೈನ್ನಲ್ಲಿ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು ಎಂದು  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ ಆರ್ ದಿನೇಶ್ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.jk-logo-justkannada-mysore

ಈ ಮೇಳದಲ್ಲಿ 211 ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು 23 ರಾಜ್ಯಗಳ ರೈತರಿಗೆ ಸೀಡ್ ಪೋರ್ಟಲ್ ಗಳ ಮೂಲಕ ಬೀಜಗಳನ್ನು ರೈತರು ಮನೆ ಬಾಗಿಲಿಗೆ ವಿತರಿಸಲಾಗಿದೆ ಎಂದು ಬಾ. ದಿನೇಶ್ ತಿಳಿಸಿದರು.feb 8-National Horticulture Fair –online- Director of Indian Institute of Horticultural Research- M R Dinesh

ರಾಷ್ಟ್ರೀಯ ತೋಟಗಾರಿಕೆ ಮೇಳದ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಧಾನ ವಿಜ್ಞಾನಿ ಡಾ. ಎಂ. ವಿ. ಧನಂಜಯ್ ಮೇಳದ ಚಟುವಟಿಕೆ ಹಾಗೂ ಕಾರ್ಯಕ್ರಮ ಗೋಳನ್ನು ವಿವರಿಸಿದರು.  ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಈ ಬಾರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವರ್ಚುವಲ್ ಹಾಗೂ ಭೌತಿಕವಾಗಿ ನಡೆಸಲಾಗುವುದು ಎಂದರು. ರೈತರು ಕ್ರೀಯಾಶೀಲವಾಗಿ ಭಾಗವಹಿಸಲು ಎನ್ ಜಿಒ ಗಳು ಸಹಕರಿಸುತ್ತಿವೆ ಎಂದರು. ರೈತರಲ್ಲಿ ಉದ್ಯಮ ಶೀಲ ತಂತ್ರಜ್ಞಾನ ನನ್ನು ಅಳವಡಿಸಿ ಕೊಳ್ಳಲು ಉದ್ದೇಶ ಹೊಂದಿದೆ ಎಂದರು.

Key words:  feb 8-National Horticulture Fair –online- Director of Indian Institute of Horticultural Research- M R Dinesh