ಕರೋನಾ ವೈರಸ್​ ಭೀತಿ: ಅಭಿಮಾನಿಗಳಿಂದ ದೂರ ಓಡುವ ಸನ್ನಿ !

ಬೆಂಗಳೂರು, ಜನವರಿ 30, 2019 (www.justkannada.in): ಅಭಿಮಾನಿಗಳೊಂದಿಗೆ ಸದಾ ನಗುತ್ತಾ ಮಾತನಾಡುತ್ತಿದ್ದ ಸನ್ನಿ ಲಿಯೋನ್ ಈಗ ದೂರ ಉಳಿಯುತ್ತಿದ್ದಾರೆ!

ಯಾರಾದರೂ ವಿಶ್​ ಮಾಡುತ್ತಾ ಸೆಲ್ಫಿ ಕೇಳಲು ಬಂದರೆ ಸಾಕು ದೂರ ಓಡುತ್ತಿದ್ದಾರಂತೆ. ಸನ್ನಿ ಲಿಯೋನ್​ರಲ್ಲಿ ಆಗಿರುವ ಈ ಬದಲಾವಣೆಗೂ ಕಾರಣ ಇದೆ. ಕರೋನಾ ವೈರಸ್ ಭೀತಿ!

ದೇಶದಿಂದ ಹೊರ ಇರುವ ಸನ್ನಿ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್​ ತೊಡುತ್ತಿದ್ದಾರೆ. ತಾವು ಭೇಟಿ ಮಾಡಿದವರಿಗೂ ಮಾಸ್ಕ್​ ತೊಡುವಂತೆ ಸಲಹೆ ನೀಡುತ್ತಿದ್ದಾರೆ. ಮೊದಲು ಆರೋಗ್ಯ ಮುಖ್ಯ. ಯಾವುದನ್ನೂ ನಿರ್ಲಕ್ಷಿಸಬೇಡಿ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದೆಲ್ಲೆಡೆ ಈ ಕರೋನಾ ವೈರಸ್​ ಭೀತಿ ಇದೆ. ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್​ಗೆ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನೂ ಭಾರತದಲ್ಲೂ 21 ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಲಾಗಿದೆ.