FDI ಪರೀಕ್ಷೆ ಹಗರಣ : ಮೈಸೂರು ಪೊಲೀಸ್ ಅಧಿಕಾರಿಯ ಸಂಭಾಷಣೆ ಆಡಿಯೋ ರಿಲೀಸ್ ಮಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

ಮೈಸೂರು,ಸೆಪ್ಟಂಬರ್,17,2022(www.justkannada.in):  FDI ಪರೀಕ್ಷೆ ಹಗರಣ ಕುರಿತ ಮೈಸೂರಿನ ಪೊಲೀಸ್ ಅಧಿಕಾರಿಯ ಸಂಭಾಷಣೆ ಆಡಿಯೋವನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ಬಿಡುಗಡೆ ಮಾಡಿದರು.

FDI  ಪರೀಕ್ಷೆ ಹಗರಣ ಡೀಲ್ ನಲ್ಲಿ ಭಾಗಿಯಾಗಿದ್ದ ಮೈಸೂರಿನ PSI ಅಶ್ವಿನಿ ಅನಂತಪುರ ಆಡಿಯೋವನ್ನ  ಎಂ.ಲಕ್ಷ್ಮಣ್ ರಿಲೀಸ್ ಮಾಡಿದರು.  FDI ಪರೀಕ್ಷೆ ವಿಚಾರವಾಗಿ ಲಂಚದ ಬೇಡಿಕೆ ಇಟ್ಟಿರುವ 30 ನಿಮಿಷಗಳ ಆಡಿಯೋ ಕ್ಲಿಪಿಂಗ್ ಇದಾಗಿದೆ.

ಆಡಿಯೋ ಬಿಡುಗಡೆ ಬಳಿಕ ಮಾತನಾಡಿದ ಎಂ.ಲಕ್ಷ್ಮಣ್,  ಸಂಗಮೇಶ ಜಲಕಿ ಎಂಬ ಅಭ್ಯರ್ಥಿಯ ಜೊತೆ PSI ಅಶ್ವಿನಿ ಮಾತನಾಡುವ ಆಡಿಯೋ ಸಂಭಾಷಣೆ ಇದಾಗಿದೆ. ಅಶ್ವಿನಿ ಅನಂತಪುರ ಮೈಸೂರಿನ ಎನ್ ಆರ್ ಠಾಣೆಯಲ್ಲಿ PSI ಆಗಿದ್ದು, ಮೂಲತಃ ಭಾಗಲಕೋಟೆಯ ಜಮಖಂಡಿಯವರು. PIS ಹಗರಣಕ್ಕೆ ಸಂಬಂಧಪಟ್ಟ ಡೀಲ್ ಕುದುರಿಸುತ್ತಾರೆ. ಬೆಸ್ಕಾಂ, ಚೆಸ್ಕಾಂ, ಎಫ್ ಡಿ ಐ ವಿವಿಧ ಹುದ್ದೆಗಳಲ್ಲಿ ಡೀಲ್ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಇಂತವರು ಇದ್ದಾರೆ ಎನ್ನುವ ಮಾಹಿತಿ ಇದೆ. ಸತ್ಯ ಸತ್ಯತೆ ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ಹತ್ತು ಬಾರಿ  ಹಣ ವರ್ಗಾವಣೆಯಾಗಿದ್ದು, ಅಶ್ವಿನಿ ಎಂಬುವವರು ವ್ಯವಹಾರ ಕುದುರಿಸುತ್ತಿದ್ದರು. 20 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಬೆಸ್ಕಾಂ ಹುದ್ದೆಯ ಡೀಲ್ ಬಗ್ಗೆಯೂ ಸಂಭಾಷಣೆಯಲ್ಲಿ ಮಾತನಾಡಿದ್ದಾರೆ. ಸರ್ಕಾರದ ಬೆಂಬಲ ವಿಲ್ಲದೆ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆಡಿಯೋ ನಲ್ಲಿ ಯಾರಿಗೆ ದುಡ್ಡು ವರ್ಗಾವಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. PSI ಹಗರಣದ ಬಗ್ಗೆಯೂ ಮಾತನಾಡಿದ್ದಾರೆ. ಬಿಜೆಪಿ ಮಂತ್ರಿಗಳು ಈ ಹಗರಣದ ಹಿಂದೆ ಇದ್ದಾರೆ. ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎಂ ಲಕ್ಷ್ಮಣ್ ಆರೋಪ ಮಾಡಿದರು.

Key words: FDI- Exam –Scam-KPCC spokesperson- M. Laxman- released – audio