ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ : ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಸೆಪ್ಟೆಂಬರ್,28,2020(www.justkannada.in) : ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ರೈತರ ಪರವಾಗಿದ್ದೇನೆ, ಅಧಿಕಾರಕ್ಕಾಗಿ ಅಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.jk-logo-justkannada-logo

ರೈತ ವಿರೋಧಿ ಕಾನೂನು ತಿದ್ದುಪಡಿ ಖಂಡಿಸಿ ರೈತರು ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್ ಸಂಬಂಧಿಸಿದಂತೆ ಸೋಮವಾರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ರೈತರು ಸತ್ಯಾಗ್ರಹ ಮಾಡಬೇಕು ಎಂದು ನಿಶ್ಚಯ ಮಾಡಿ ಬಂದಿದ್ದಾರೆ. ರೈತರ ಆಶೀರ್ವಾದದಿಂದ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಅನ್ನದಾತರ ಭವಿಷ್ಯದ ದೃಷ್ಟಿಯಿಂದ ಈ ಕುರಿತು ವಿಧಾನಮಂಡಲದಲ್ಲಿ ಚರ್ಚೆ ನಡೆಸಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದಿದ್ದಾರೆ.

Farmers-not-allowed-unfair-CM B.S.Yeddyurappa

ನನ್ನ ಬೆಳೆ ನನ್ನ ಹಕ್ಕು ಈ ಘೋಷಣೆಯೊಂದಿಗೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತ ತಾನು ಬೆಳೆದಂತಹ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದಕ್ಕಾಗಿ ಅನೇಕ ವರ್ಷದಿಂದ ಹೋರಾಟ ಮಾಡಿದ್ದೇನೆ. ಬೇರೆ ಜಿಲ್ಲೆ, ರಾಜ್ಯಕ್ಕೆ ಹೋಗಿ ಮಾರಾಟ ಮಾಡಿದರೆ ಈ ಹಿಂದೆ ಕೇಸ್ ಹಾಕಲಾಗುತ್ತಿತ್ತು. ಆದರೆ, ಈ ಕಾಯ್ದೆ ತಿದ್ದುಪಡಿಯಿಂದ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ವಿವರಿಸಿದ್ದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯು ಐತಿಹಾಸಿಕ ನಿರ್ಣಯ

ಎಪಿಎಂಸಿ ತಿದ್ದುಪಡಿಯು ಐತಿಹಾಸಿಕ ನಿರ್ಣಯವಾಗಿದೆ. ರೈತರು ಯಾರೋ ಯಾರದೊ ಮರಳು ಮಾತಿಗೆ ಒಳಗಾಗಬೇಡಿ. 6 ತಿಂಗಳು, ವರ್ಷದೊಳಗೆ ಈ ಕಾಯ್ದೆ ತಿದ್ದುಪಡಿಯ ಮಹತ್ವ ನಿಮಗೆ ಅರ್ಥವಾಗುತ್ತದೆ. ಭೂ ಸೂಧಾರಣಾ ಕಾಯ್ದೆ ತಿದ್ದುಪಡಿಯನ್ನು 54 ಎಕರೆಗೆ ಸೀಮಿತಗೊಳಿಸಲಾಗಿದೆ. ನೀರಾವರಿ ಭೂಮಿಯನ್ನು ಯಾರಾದರೂ ಕೊಂಡುಕೊಂಡರೆ ಅದನ್ನು ನೀರಾವರಿಗೆ ಬಳಸುವಂತೆ ಷರತ್ತು ಹಾಕಲಾಗಿದೆ. ಎಸ್ಸಿ,ಎಸ್ಟಿ, ಸಣ್ಣ ಹಾಗೂ ಅತಿ ಸಣ್ಣ ರೈತರ ಜಮೀನು ಕೊಂಡುಕೊಳ್ಳುವ ಅಧಿಕಾರವನ್ನು ನೀಡಿಲ್ಲ ಎಂದು ಮಾಹಿತಿ ನೀಡಿದರು.

ಕೈಗಾರಿಕೆ ಅಭಿವೃದ್ಧಿ ಸಾಧ್ಯವಿದೆ

ರಾಜ್ಯದಲ್ಲಿ  18 ,20 ಲಕ್ಷ ಸಾಗುವಳಿಯಾಗದ ಬಂಜರೂ ಭೂಮಿಯಿದೆ.  ರಾಜ್ಯಕ್ಕೆ ಕೈಗಾರಿಕೆಗಳ ಅಗತ್ಯವಿದೆ. ಕೃಷಿಯಿಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಉದ್ಯೋಗ ಸಿಗುತ್ತದೆ. ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಇದನ್ನ ಮನಸ್ಸಲ್ಲಿಟ್ಟುಕೊಂಡು ಎಪಿಎಂಸಿಗೆ ತಿದ್ದುಪಡಿ ತಂದಿದ್ದೆವೆ ಎಂದರು.

ರೈತರು ಅಡ್ಡದಾರಿಗೆ ಎಳೆಯುವವರ ಮಾತಿಗೆ ಮರುಳಾಗಬೇಡಿ

ರೈತರಲ್ಲಿ ಕೈ ಮುಗಿದು ಪ್ರಾರ್ಥಿಸುವೆ ಮುಂದಿನ ದಿನದಲ್ಲಿ ಈ ಕಾಯ್ದೆಯಿಂದ  ಯಾವ ರೀತಿ ಅನುಕೂಲವಾಗತ್ತೆ ಎಂದು ನಿಮಗೆ ಮನವರಿಕೆಯಾಗುತ್ತದೆ. ಅನಾವಶ್ಯಕವಾಗಿ ರೈತರು ಗೊಂದಲ್ಲಕ್ಕೆ ಒಳಗಾಗಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ  ಎಪಿಎಂಸಿ ಗೆ ತಿದ್ದುಪಡಿ ತಂದಿದ್ದು, ರೈತರ ಅನುಕೂಲದ ದೃಷ್ಠಿಯಿಂದ. ರೈತರಿಗೆ ಉಪಯೋಗವಾಗುವ ಅನೇಕ ಯೋಜನೆ ರೂಪಿಸಲಾಗುತ್ತಿದೆ. ರೈತರು ಅಡ್ಡದಾರಿಗೆ ಎಳೆಯುವವರ ಮಾತಿಗೆ ಮರುಳಾಗಬೇಡಿ. ನಿಮ್ಮ ಹಿತಕ್ಕೆ ಧಕ್ಕೆಯಾಗುವ ಕೆಲಸ ಯಡಿಯೂರಪ್ಪ ಮಾಡುವುದಿಲ್ಲ ಎಂದರು.

ರೈತರಿಗೆ ಅನ್ಯಾಯವಾದರೆ ಮಾರ್ಪಾಡಿಗೆ ಸಿದ್ಧ 

ಈ ಹಿಂದೆ ಕೃಷಿ ಭೂಮಿ ಇಲ್ಲದವರು ಕೃಷಿ ಮಾಡಬಹುದು. ರೈತರಿಗೆ ಅನ್ಯಾಯವಾಗುವುದಿಲ್ಲ. ಹಾಗೇನಾದರೂ ಆದರೆ, ಯಾವುದೇ ಮಾರ್ಪಾಡು ಮಾಡುವುದಕ್ಕೆ ಸಿದ್ಧ. ಎಪಿಎಂಸಿಯಲ್ಲಿ ದಲ್ಲಾಳಿಯವರ ಹಾವಳಿಯಿತ್ತು. ನಾನು ಎಪಿಎಂಸಿ ಅಧ್ಯಕ್ಷನಾಗಿದ್ದೆ. ಎಪಿಎಂಸಿ ಪೂರ ಬಾಗಿಲು ಹಾಕಿಸಿಲ್ಲ. ಎಪಿಎಂಸಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತಿದ್ದೇವೆ ಅಷ್ಟೆ. ಈ ಹಿಂದೆ ಕಾಂಗ್ರೆಸ್ ಅವರು ತಿದ್ದುಪಡಿ ಮಾಡಬೇಕು ಎಂದಿದ್ದರು.

ಕೈಗಾರಿಕೆಗೆ 1%ಗೂ ಕಡಿಮೆ ಭೂಮಿ ನೀಡಿದ್ದೇವೆ

ಬರಡುಭೂಮಿಯಲ್ಲಿ ಮಾತ್ರವೇ ಕೈಗಾರಿಕೆಗೆ ಅವಕಾಶ ನೀಡಲಾಗುವುದು. ಕೈಗಾರಿಕೆಗೆ 1%ಗೂ ಕಡಿಮೆ ಭೂಮಿ ನೀಡಿದ್ದೇವೆ. ರೈತರು ಈ ಕಾಯ್ದೆಗಳ ಒಳಿತುಕೆಡುಕುಗಳ ಬಗ್ಗೆ ಚರ್ಚೆಗೆ ಬರುತ್ತಿಲ್ಲ. ನೂರಕ್ಕೆ 85% ರೈತರು ಒಪ್ಪುತ್ತಾರೆ. ನಾನೇ ಪ್ರವಾಸ ಮಾಡಿ ಇದರ ಪರಿಣಾಮ ನೋಡುತ್ತೇನೆ.  ಮೊದಲು 108 ಎಕರೆಗೆ ಭೂಮಿ ಖರೀದಿಗೆ ಅವಕಾಶ ನೀಡುವ ಯೋಚನೆಯಿತ್ತು. ಆದರೆ, ಐದು ಜನರ ಕುಟುಂಬಕ್ಕೆ 54 ಎಕರೆ ಭೂಮಿ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎಪಿಎಂಸಿ ಸಿಬ್ಬಂದಿಗೆ ತೊಂದರೆ ಮಾಡುವುದಿಲ್ಲ

ಎಪಿಎಂಸಿ ಮುಚ್ಚುವುದಕ್ಕೆ ಬಿಡುವುದಿಲ್ಲ. ಸಿಬ್ಬಂದಿಗೆ ತೊಂದರೆಯಾದರೆ ಸರಕಾರದಿಂದ ನೆರವು ನೀಡಲಾಗುವುದು. ಎಪಿಎಂಸಿ ಇರಲೇಬೇಕು ಎಂದು ತಿಳಿಸಿದರು.

key words : Farmers-not-allowed-unfair-CM B.S.Yeddyurappa