ರೈತರು, ನೀರಾವರಿಗೆ ಹೆಚ್ಚಿನ ಆದ್ಯತೆ: 100 ದಿನಗಳಲ್ಲಿ ಬೆಂಗಳೂರಿನ  ಚಿತ್ರಣವನ್ನೇ ಬದಲಿಸುತ್ತೇವೆ- ಸಿಎಂ ಬಿ.ಎಸ್ ಯಡಿಯೂರಪ್ಪ ನುಡಿ…

ಬೆಂಗಳೂರು,ನ,5,2019(www.justkannada.in):  ಬೆಂಗಳೂರು ಸಬರ್ಬನ್ ರೈಲ್ವೇ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಇನ್ನು ನೂರು ದಿನಗಳಲ್ಲಿ ಬೆಂಗಳೂರು ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ರಾಜ್ಯ ಬಿಜೆಪಿ ಸರ್ಕಾರ  ನೂರುದಿನಗಳು ಪೂರೈಸಿದ ಹಿನ್ನೆಲೆ, ಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೂರುದಿನದ ಸಾಧನೆ ಪುಸ್ತಕವನ್ನ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ತೆರಿಗೆ ಸಂಗ್ರಹ ಗುರಿ ಮುಟ್ಟಿದ್ದೇವೆ. ರೈತರು, ನೀರಾವರಿಗೆ ಹೆಚ್ಚಿನ ಆದ್ಯತೆ   ನೀಡಿದ್ದೇವೆ. ರೈತ ಸಮುದಾಯಕ್ಕೆ ಬಹಳ ದೊಡ್ಡ ನೆರವು ನೀಡಲಾಗಿದೆ. ಕಳಸ ಬಂಡೂರಿ ಕಡಿಯುವ ನೀರಿನ ಯೋಜನೆಗೆ ಕೇಂದ್ರದ ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ಆಗಿದೆ. ಇನ್ನು  ರೈತರಿಗೆ ಕಿಸಾನ್ ಸನ್ಮಾನ್ ಅಡಿ ನಾಲ್ಕು ಸಾವಿರ ಗೌರವ ಧನ ನೀಡಲಾಗುತ್ತಿದೆ. ಅದರಲ್ಲಿ ಎರಡು ಸಾವಿರ ರೈತರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಮಾಹಿತಿ ನೀಡಿದರು.

ತುಮಕೂರು ಜಿಲ್ಲೆಯಲ್ಲಿ 60 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದದೆ. ನಮ್ಮ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಆದ್ಯತೆನೀಡುತ್ತಿದ್ದೇವೆ. ರಾಜ್ಯದಲ್ಲಿ 1.5 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿವೆ. ಈ ಪೈಕಿ 30,800 ಮನೆಗಳನ್ನ ಈಗಾಗಲೇ ನಿರ್ಮಾಣ ಮಾಡಲಾಗಿದೆ. ಸಿದ್ದಗಂಗಾ ಶ್ರೀ, ಬಾಲಗಂಗಾದರನಾಥ ಸ್ವಾಮೀಜಿ ಹೆಸರಲ್ಲಿ ತಲಾ 25 ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ . ಪ್ರವಾಹಪೀಡಿತ ಗ್ರಾಮೀಣ ಜನರ ವಲಸೆ ತಡೆಯಲು 50 ಹೊಸ ಉದ್ಯೋಗ ಕೇಂದ್ರ ಸ್ಥಾಪನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ನಾನು ಅಧಿಕಾರಕ್ಕೆ ಬಂದಾಗ ನಾನು ಒಂದು ಮಾತನ್ನ ಸ್ಪಷ್ಟವಾಗಿ ಹೇಳಿದ್ದೆ. ಅಭಿವೃದ್ಧಿಯೇ ನಮ್ಮ ಆಡಳಿತ ಮಂತ್ರ. ನಮ್ಮ ಸರ್ಕಾರ ರೈತರ ಪರ ಸರ್ಕಾರ ಎಂದಿದ್ದೆ. ಮೊದಲು ಹೇಳಿದಂತೆ ನಡೆದಿದ್ದೇವೆ. 25 ಲಕ್ಷ ರೈತರ ಅಕೌಂಟ್ ಗೆ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ ಹಣ ಹಾಕಿದ್ದೇವೆ.. ಅತಿವೃಷ್ಟಿಗೆ ತುತ್ತಾದ ಜನರ ನೆರವಿಗೆ ಧಾವಿಸಿದ್ದೇವೆ. ಹಗಲು ರಾತ್ರಿ ವಿಶೇಷ ಶ್ರಮ ಹಾಕಿ ಕೆಲಸ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಗಣಿ , ವಾಣಿಜ್ಯ ಸೇರಿದಂತೆ ತೆರಿಗೆ ಸಂಗ್ರಹ ಗುರಿ ಮುಟ್ಟಿದ್ದೇವೆ ಎಂದು ತಿಳಿಸಿದರು.

Key words: Farmers- preference –irrigation-change – Bangalore – CM BS Yeddyurappa.