ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್ ವೈರಿಂದ ರೈತರಿಗೆ ಅನ್ಯಾಯವಾಗಲ್ಲ- ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಸೆಪ್ಟಂಬರ್,27,2020(www.justkannada.in):  ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯಗಲು ಬಿಡುವುದಿಲ್ಲ. ರೈತರ ಪರ ನಮ್ಮ ಸರ್ಕಾರ ಸದಾ ಇರಲಿದೆ  ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ 26 ಕ್ಕೆ ಸಭೆ ಕರೆದಿದ್ದೆ. ಆದರೆ, ಅಂದು ಅಧಿವೇಶನ ಇದ್ದಿದ್ದರಿಂದ 28ಕ್ಕೆ ಸಭೆ ನಡೆಸಲು ಸೂಚಿಸಿದ್ದೆ. ಆದರೆ, ಅಂದು ರೈತರ ಪ್ರತಿಭಟನೆ ಇರುವುದರಿಂದ ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಅಲ್ಲದೆ, ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾದ ಮೇಲೆಯೇ ಒಪ್ಪಿಗೆ ಪಡೆಯಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.farmers-injustice-pm-narendra-modi-cm-bs-yeddyurappa-minister-st-somashekhar

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರಸರ್ಕಾರ ರೈತರಿಗೆ ತೊಂದರೆಯಾಗುವ ಯಾವ ಕಾಯ್ದೆಯನ್ನೂ ಮಾಡಿಲ್ಲ. ಒಂದು ವೇಳೆ ರೈತರಿಗೆ ಅನ್ಯಾಯವಾಗುವುದಿದ್ದರೆ ರೈತ ನಾಯಕರಾಗಿರುವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರೇ ಒಪ್ಪಿಕೊಳ್ಳುತ್ತಿರಲಿಲ್ಲ. ಇಂಥ ಒಳ್ಳೆಯ ಮಸೂದೆಯನ್ನು ನಾನು ಮಂಡಿಸಿದ್ದೇನೆ. ಇದರ ಬಗ್ಗೆ ಸದನದಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

Key words: Farmers – Injustice-PM narendra Modi- CM BS yeddyurappa -Minister -ST Somashekhar.