ರೈತರಿಗೆ ಸಿಹಿಸುದ್ದಿ: ಹೊಸ ಕೃಷಿನೀತಿ ಜಾರಿ- ಬಜೆಟ್ ನಲ್ಲಿ ಸಿಎಂ ಬಿಎಸ್ ವೈ ಘೋಷಣೆ

ಬೆಂಗಳೂರು,ಮಾ,5,2020(www.justkannada.in):  ಇಂದು ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.

2020-21ನೇ ಸಾಲಿನ ಬಜೆಟ್  ಮಂಡಿಸುತ್ತಿರುವ ಸಿಎಂ ಬಿಎಸ್ ವೈ ಹೊಸ ಕೃಷಿ ನೀತಿ ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಗೆ ರಾಜ್ಯದಿಂದ ನೀಡುತ್ತಿದ್ದ ನಾಲ್ಕು ಸಾವಿರ ಹಣ ಮುಂದುವರಿಯಲಿದ್ದು , ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ ಮೀಸಲಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಣ್ಣು, ನೀರು ಪರೀಕ್ಷೆಗೆ ಸಂಚಾರಿ ಹೆಲ್ತ್ ಕ್ಲಿನಿಕ್. ಬಿತ್ತನೆ ಬೀಜ, ರಸಗೊಬ್ಬರ ಸಂಬಂಧಿಸಿ ಹೊಸ ನೀತಿ. ಮತ್ಸ ವಿಕಾಸ ಯೋಜನೆ, ಸಮಗ್ರ ವರಾಹ ಯೋಜನೆ ಜಾರಿಗೆ ತರಲು ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್. ರೈತರು ಅಧಿಕ ಬಡ್ಡಿ ದರದಿಂದ ತಪ್ಪಿಸಲು ಹೊಸ ಕಾರ್ಯಕ್ರಮ, ಕಿಶಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ಮೀಸಲಿಡಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: farmers-  Implementation – New Agricultural Policy- CM BS Yeddyurappa -Budget.