ರೈತರ ಹೋರಾಟ ಮತ್ತಷ್ಟು ತೀವ್ರ: ರೈತರ ರಕ್ತದಲ್ಲಿ ಕೇಂದ್ರ ಸಚಿವರಿಗೆ ಪತ್ರ….

kannada t-shirts

ನವದೆಹಲಿ,ಜನವರಿ,13,2021(www.justkannada.in): ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರೈತರ ಹೋರಾಟ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ರೈತ ವಿರೋಧಿ ಮೂರು ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವುದಕ್ಕೆ ಪಟ್ಟು ಹಿಡಿದಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. farmer-struggle-aggravated-letter-blood-union-minister

ಇದರ ಭಾಗವಾಗಿ ಬುಧವಾರ ಬೆಳಗ್ಗೆಯಿಂದಲೇ ರೈತರ ರಕ್ತವನ್ನು ಸಂಗ್ರಹಿಸಿ ಆ ರಕ್ತ ಬಳಸಿ ಸಹಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸಚಿವರಿಗೆ  ಹಾಗೂ ಸುಪ್ರಿಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ 21 ಪ್ರಶ್ನೆಗಳಿರುವ ಪತ್ರಗಳನ್ನು ಬರೆಯುತ್ತಿದ್ದಾರೆ.

`ನಿಮ್ಮ ನಿರ್ಧಾರ ಕೇಂದ್ರದ ಪರವಾಗಿದ್ದೀಯ? ಅಥವಾ ರೈತರ ಪರವೇ? ನೀವು ಕೇಂದ್ರದ ಪಾರ್ಟಿ. ಹಾಗಾಗೀ ನೀವು ಕಾನೂನುಗಳನ್ನು ರದ್ದುಗೊಳಿಸಿಲ್ಲ.’ ಎಂದು ಪತ್ರದಲ್ಲಿ  ಬರೆಯುತ್ತಿದ್ದಾರೆ.farmer-struggle-aggravated-letter-blood-union-minister

ಪಂಜಾಬ್ ನ ಲೂದಿಯಾನಾದವರಾದ ರೈತ ಮುಖಂಡ ತರಣ್ ಜಿತ್ ಸಿಂಗ್ ನಿಮಣಾ ಅವರು ಈ  ಪತ್ರ ಚಳವಳಿಯ ನೇತೃತ್ವ ವಹಿಸಿದ್ದಾರೆ.

Key words: farmer-struggle – aggravated- Letter – blood- Union Minister

website developers in mysore