ಮೇ 26ರಂದು ಕರಾಳ ದಿನಾಚಾರಣೆಗೆ ರೈತ ಸಂಘಟನೆ ತೀರ್ಮಾನ: ಕಪ್ಪು ಬಟ್ಟೆ ಧರಿಸಿ ಹೊಲಗದ್ದೆಗಿಳಿಯಲಿದ್ದಾರೆ ಅನ್ನದಾತರು…

ಬೆಂಗಳೂರು,ಮೇ,25,2021(www.justkannada.in): ಕೇಂದ್ರ ಸರ್ಕಾರದ  ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಮೇ 26ಕ್ಕೆ(ನಾಳೆಗೆ) ಆರು ತಿಂಗಳು ಪೂರೈಸಲಿದ್ದು ಈ ಹಿನ್ನೆಲೆಯಲ್ಲಿ ನಾಳೆ ಕರಾಳದಿನಾಚಾರಣೆ ಆಚರಿಸಲು ರೈತಸಂಘಟನೆ ನಿರ್ಧರಿಸಿದೆ.jk

ದೆಹಲಿಯ ಸುತ್ತಾಮುತ್ತಾ, ದೇಶದಾದ್ಯಂತ ರೈತ ಚಳುವಳಿ ವಿಸ್ತರಿಸಿದ್ದು, ಪ್ರಪಂಚದ ಹಲವಾರು ದೇಶಗಳಿಂದಲೂ ರೈತರ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರ ಹೋರಾಟ ನಾಳೆಗೆ 6 ತಿಂಗಳು ಪೂರೈಸಲಿದ್ದು, ಹೀಗಾಗಿ  ಕೇಂದ್ರದ ವಿರುದ್ಧ ಮೇ 26 ರಂದು ದೇಶದಾದ್ಯಂತ ಕರಾಳ ದಿನಾಚರಣೆ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

ಹೀಗಾಗಿ ರಾಜ್ಯದಲ್ಲೂ ಕರಾಳ ದಿನ ಆಚರಿಸಲು ಸಂಯುಕ್ತ ಹೋರಾಟ- ಕರ್ನಾಟಕ ತೀರ್ಮಾನ ಮಾಡಿದ್ದು, ಕಾರ್ಮಿಕರು, ದಲಿತರು, ಪ್ರಗತಿಪರ ಸಂಘಟನೆಗಳಿಂದ ತಮ್ಮ ತಮ್ಮ ಮನೆ, ಕಚೇರಿಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸುವುದರ ಮೂಲಕ ಕರಾಳ ದಿನ ಆಚರಣೆ ಮಾಡಲಿದ್ದಾರೆ.farmer-organizations-decision-may-26-black-day-badagalapur-nagendra

ಹಾಗೆಯೇ ರೈತ ಸಮೂಹ ಹೊಲಗಳಲ್ಲಿ ಕಪ್ಪು ಬಟ್ಟೆ ಧರಿಸಿ ಹೊಲಗದ್ದೆಗಿಳಿದು  ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

Key words: Farmer- Organization’s- decision – May 26-black day-badagalapur nagendra