ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ಯಶ್ ಬರ್ತ್ ಡೇ ಆಚರಿಸಲು ಅಭಿಮಾನಿಗಳ ಸಿದ್ಧತೆ

ಬೆಂಗಳೂರು, ಜನವರಿ 03, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ ಹಾರ, ಕೇಕ್ ತಂದು ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ 5000 ಕೆ.ಜಿ. ತೂಕದ ಕೇಕ್ ಜತೆಗೆ ಮತ್ತೊಂದು ವಿಶೇಷತೆಯೂ ರಾಕಿ ಬಾಯ್ ಹುಟ್ಟುಹಬ್ಬಕ್ಕಿರಲಿದೆ.

ಈ ಬಾರಿ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಯಶ್ ಹುಟ್ಟುಹಬ್ಬ ಆಚರಿಸಲಿದ್ದಾರೆ. ಜನವರಿ 8 ರಂದು ಯಶ್ ಈ ಮೈದಾನಕ್ಕೆ ಆಗಮಿಸಲಿದ್ದು, ಅಲ್ಲಿಯೇ ಅಭಿಮಾನಿಗಳು ಆಗಮಿಸಿ ಬರ್ತ್ ಡೇ ಸಂಭ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.