‘ಡಬ್ಬಲ್ ಮೀನಿಂಗ್’ ಕಾಮಿಡಿ ಕಿಲಾಡಿ: ಝೀ ಕನ್ನಡ ರಿಯಾಲಿಟಿ ಶೋ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರ ಅಸಮಾಧಾನ

Promotion

ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಕುರಿತು ವೀಕ್ಷಕರಿಂದ ಸಾಕಷ್ಟು ಬೇಸರದ ಮಾತುಗಳು ಕೇಳಿ ಬರುತ್ತಿವೆ.

ಹಾಸ್ಯದ ನೆಪದಲ್ಲಿ ಡಬಲ್ ಮೀನಿಂಗ್ ಸ್ಕಿಟ್ ಗಳೇ ಹೆಚ್ಚಾಗುತ್ತಿವೆ ಎಂಬ ಅಪಸ್ವರ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.

ಜಗ್ಗೇಶ್, ಯೋಗರಾಜ್ ಭಟ್ ಮತ್ತು ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿರುವ ಕಾಮಿಡಿ ಕಿಲಾಡಿಗಳು ಶೋವನ್ನು ಮಕ್ಕಳೂ ಸಹಿತ ಕುಟುಂಬ ಸಮೇತ ವೀಕ್ಷಿಸುತ್ತಾರೆ.

ಹಾಸ್ಯದ ನೆಪದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚಾಗುತ್ತಿವೆ. ಇದರಿಂದ ಕುಟುಂಬ ಸಮೇತ ಕಾರ್ಯಕ್ರಮ ವೀಕ್ಷಿಸಲು ಮುಜುಗರವಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾ ಮುಖಾಂತರ ವೀಕ್ಷಕರು ಆಕ್ಷೇಪಿಸಿದ್ದಾರೆ.