ನಕಲಿ ನಂದಿನಿ ತುಪ್ಪ ಕಾರ್ಯಚರಣೆ: ಮೈಮುಲ್ ನಿಂದಲೇ ಈ ಅಕ್ರಮ ನಡೆದಿದೆ- ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಂದ ಗಂಭೀರ ಅರೋಪ.

ಮೈಸೂರು,ಡಿಸೆಂಬರ್,21,2021(www.justkannada.in):  ಮೈಸೂರಿನ ಹೊರವಲಯದಲ್ಲಿ ನಡೆದ ನಕಲಿ ನಂದಿನಿ ತುಪ್ಪ ಕಾರ್ಯಚರಣೆಗೆ ಸಂಬಂಧಿಸಿದಂತೆ ಮೈಮುಲ್ ನಿಂದಲೇ ಈ ಅಕ್ರಮ ನಡೆದಿದೆ ಎಂದು ಮೈಸೂರು  ಹೋಟೆಲ್ ಮಾಲೀಕರ ಸಂಘ ಗಂಭೀರ ಅರೋಪ ಮಾಡಿದೆ.

ಈ ಕುರಿತು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ನಾರಾಯಣಗೌಡ, ನಮಗೆ ಉತ್ತಮವಾಗಿ ವ್ಯವಹಾರ ಮಾಡಲು ಬೀಡುತ್ತಿಲ್ಲ. ಮೈಮೂಲ್ ತೊಂದರೆ ನೀಡುತ್ತಿದ್ದಾರೆ. ಕೆಲವು ಇಲಾಖೆಗಳು ನಮಗೆ ತೊಂದರೆ ನೀಡುತ್ತಿದ್ದಾರೆ. ಪ್ರಾಮಾಣಿಕವಾಗಿ ವ್ಯವಹಾರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ನಕಲಿ ನಂದಿನಿ ತುಪ್ಪ ಕಾರ್ಯಚರಣೆ ವಿಚಾರ, ಇದು ಮೈಮೂಲ್ ನ ಜವಾಬ್ದಾರಿ ಆಗಿದೆ. ಮೈಮೂಲ್ ನಿಂದಲೇ ಈ ಅಕ್ರಮ ನಡೆದಿದೆ. ಮೈಸೂರು ಡೈರಿ ಅಧಿಕಾರಿಗಳು ನೌಕರರರು ಇದರಲ್ಲಿ ಶಾಮೀಲಾಗಿದ್ದಾರೆ. ನಕಲಿ ತುಪ್ಪ ತಯಾರಿಸಲು ಪ್ಯಾಕಿಂಗ್ ಮೆಟೀರಿಯಲ್ ಡೈರಿಯವರೇ ಸರಬರಾಜು‌ ಮಾಡಿದ್ದಾರೆ. ಡೈರಿಯವರು ಉತ್ಪನ್ನಗಳನ್ನ ಬೇಡಿಕೆ ಅನುಗುಣವಾಗಿ ಸರಬರಾಜು ಮಾಡಲು ಆಗುತ್ತಿಲ್ಲ. ಈ ಅಕ್ರಮದಲ್ಲಿ ಸುಖಾಸುಮ್ಮನೆ ಮಹಾಲಕ್ಷ್ಮಿ ಸ್ವೀಟ್ಸ್ ನ ಮಧ್ಯ ತಂದಿದ್ದಾರೆ. ಈ ಅಕ್ರಮದಲ್ಲಿ ಡೈರಿಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಡೈರಿ ಹಾಲಿನ ಏಜೆನ್ಸಿಗಳ ಜೊತೆ ಹೊರಗುತ್ತಿಗೆ ನೀಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಆಗ್ರಹಿಸಿದರು.

ಇದೇ ವೇಳೆ ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕ ಶಿವಕುಮಾರ್ ಮಾತನಾಡಿ,  ಮಹಾಲಕ್ಷ್ಮಿ ಸ್ವೀಟ್ಸ್‌ನವರಿಂದ ನಕಲಿ ತುಪ್ಪ ಬಳಕೆ ವಿಚಾರ, ತಾವು ನಡೆದು ಬಂದ ಹಾದಿಯ ವಿವರ ನೀಡಿದರು. ಕೊರೊನಾದಲ್ಲಿ ಸಾಕಷ್ಟು ನಷ್ಟವಾಗಿದೆ. ಇದರ ನಡುವೆ ನಾವು ಸಮಾಜಮುಖಿ ಕೆಲಸ‌ ಮಾಡಿದ್ದೇವೆ. ಮೈಸೂರಿನಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಆದರೂ ಯಾವುದೇ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ನಾನೇ ನಮ್ಮ ಗುಣಮಟ್ಟದ ಪರೀಕ್ಷೆಗೆ ನೀಡಿದ್ದೇವೆ. ಜನರಿಗೆ ತೃಪ್ತಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. 800 ಕುಟುಂಬಗಳು ನಮ್ಮ ಆಶ್ರಯದಲ್ಲಿದೆ ನಾನು ಸರ್ಕಾರಕ್ಕೆ 39.7 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ನನಗೆ ಈ ರೀತಿ ಕೃತ್ಯ ಮಾಡುವುದಿಲ್ಲ. ನಾನು ವ್ಯಾಪಾರವನ್ನು ಬಂದ್ ಮಾಡುತ್ತೇನೆ. ಈ ರೀತಿಯ ಕೃತ್ಯವೆಸಗುವುದಿಲ್ಲ. ರೈತರಿಗೆ ಅನುಕೂಲವಾಗಲಿ ಅಂತಾ ನಂದಿನಿ ತುಪ್ಪ. ಖರೀದಿ ಮಾಡುತ್ತಿದ್ದೆ ಎಂದು ಹೇಳಿದರು.

Key words: Fake- Nandini -Ghee –Function-mysore-Hotel Owners Association.