ನಕಲಿ ಬಿಲ್ ಸೃಷ್ಠಿಸಿ ಅಕ್ರಮ ಆರೋಪ: ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಂ.ರವೀಂದ್ರ ದೂರು

ಮೈಸೂರು,ಜನವರಿ,19,2023(www.justkannada.in): ಮೈಸೂರಿನ , ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇದರ ಅಧೀನ ಕಚೇರಿಗಳಲ್ಲಿ 2010 ರಿಂದ 2022 ರವರೆಗೆ “ಮೆಡಿಕಲ್ ಬಿಲ್ ಮರು ಪಾವತಿಗಾಗಿ , ಹೆಚ್ಚುವರಿ /ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ಎಂ. ಅವರು ದೂರು ನೀಡಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ, ಲೋಕಾಯುಕ್ತಕ್ಕೆ , ಮೈಸೂರು ಜಿಲ್ಲಾಧಿಕಾರಿಗಳಿಗೆ, ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿರುವ ಎಂ.ರವೀಂದ್ರ ಅವರು, ಮೈಸೂರಿನ , ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇದರ ಅಧೀನ ಕಚೇರಿಗಳಲ್ಲಿ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು 2010 ರಿಂದ 2022 ರವರೆಗೆ “ಮೆಡಿಕಲ್ ಬಿಲ್ ಮರು ಪಾವತಿಗಾಗಿ , ಹೆಚ್ಚುವರಿ /ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಮಾನ್ಯವಲ್ಲದ ಬಿಲ್ಲುಗಳನ್ನು ಸಹ ಮರುಪಾವತಿಗೊಳಿಸಿ, ಇದರೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಅಧಿಕಾರಿಗಳ ಹಾಗೂ ಸದರಿ ಅಕ್ರಮಕ್ಕೆ/ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವ ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಹಾಗೆಯೇ   2010 ರಿಂದ 2022 ರವರೆಗೆ ಮರುಪಾವತಿಯಾಗಿರುವ “ಮೆಡಿಕಲ್ ಬಿಲ್” ಅನ್ನು ತನಿಖೆಗೆ ಒಳಪಡಿಸಿ ಸರ್ಕಾರಕ್ಕೆ ನಷ್ಟವಾಗಿರುವ ಹಣವನ್ನು ಸದರಿ ಅಧಿಕಾರಿಗಳಿಂದ ಮುಟ್ಟುಗೋಲು ಹಾಕಿಕೊಳ್ಳುವುದರ ಸಹಿತ ಆರೋಪಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಂ. ರವೀಂದ್ರ ಅವರು ನೀಡಿರುವ ದೂರಿನ ಸಾರಾಂಶ ಹೀಗಿದೆ.

ನನಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮೈಸೂರು ಮತ್ತು ಇಲ್ಲಿನ ಅಧೀನ ಕಚೇರಿಗಳಲ್ಲಿ (A,B,C,D ವೃಂದದ ನೌಕರರು) ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು , ಕರ್ತವ್ಯ ಲೋಪವೆಸಗಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ, ಹೆಚ್ಚುವರಿಯಾಗಿ ಬಿಲ್ಲುಗಳನ್ನು ಸೃಷ್ಟಿಸಿಕೊಂಡು, DHO ರವರ ಸಹಿಯನ್ನು ನಕಲು ಮಾಡಿ, ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವೇಸಗುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು.  ಇದನ್ನು ಅಧಿಕೃತವಾಗಿ ದಾಖಲೆ ಕಲೆ ಹಾಕಲು ದಿನಾಂಕ:19/08/2022 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದೆ ಆದರೆ ಅರ್ಜಿ ತಿರಸ್ಕರಿಸಿ ಮಾಹಿತಿ ನೀಡಲು ನಿರಾಕರಿಸಿದ್ದು ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಮಾಹಿತಿ ನೀಡಲು ನಿರಾಕರಿಸಿದ್ದು,  ಹೀಗಾಗಿ ಮೈಸೂರಿನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮತ್ತು ಇದರ ಅಧೀನ ಕಚೇರಿಗಳಲ್ಲಿ, ಇದೇ ರೀತಿ 2010 ರಿಂದ 2022 ರವರೆಗೆ ಮೆಡಿಕಲ್ ಬಿಲ್ಲುಗಳ ಮರುಪಾವತಿಯಲ್ಲಿ ನಕಲಿ ಬಿಲ್ ಹೆಚ್ಚುವರಿ ಬಿಲ್/ ಮಾನ್ಯವಲ್ಲದ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದ ಬಿಲ್/ ಮರುಪಾವತಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕರ್ತವ್ಯ ಲೋಪವೆಸಗಿ, ಅಧಿಕಾರಿಗಳು 10% ಕಮಿಷನ್ ಲಂಚ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ.

ಈ ಎಲ್ಲಾ ರೀತಿಯ ಭ್ರಷ್ಟಾಚಾರದಲ್ಲಿ ಇವರುಗಳು ಸಹ ನೇರವಾಗಿ ಶಾಮಿಲಾಗಿರುವುದದ್ದುಈ ಬಗ್ಗೆ ತನಿಖೆಗೆ ಒಳಪಡಿಸಿ, ಕ್ರಿಮಿನಲ್‌ ಮೊಕದ್ದಮ್ಮೆ ದಾಖಲಿಸಿಬೇಕು.  ಪ್ರಕರಣದ ವಿಚಾರಣೆ ಮಾಡಿ, ಇವರುಗಳನ್ನು ಸೇವೆಯಿಂದ ವಜಾಗೊಳಿಸಿ, ದುರ್ಬಳಕೆಯಾಗಿರುವ ಸರ್ಕಾರಿ ಹಣವನ್ನು ಸದರಿ ಅಧಿಕಾರಿಗಳಿಂದ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಬೇಕು ಎಂದು ಎಂ. ನಾಗೇಂದ್ರ ಆಗ್ರಹಿಸಿದ್ದಾರೆ.

Key words: fake bill-M. Ravindra -complains – against –Mysore- district -health department