‘ಐ ಲವ್ ತಾಲಿಬಾನ್’ ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ ವ್ಯಕ್ತಿ:  ಬಂಧನಕ್ಕೆ ಆಗ್ರಹ.

ಬಾಗಲಕೋಟೆ,ಆಗಸ್ಟ್,20,2021(www.justkannada.in):  ಅಫ್ಘಾನಿಸ್ತಾನದಲ್ಲಿ  ತಾಲಿಬಾನ್  ಅಟ್ಟಹಾಸ  ಮೆರೆಯುತ್ತಿದ್ದು ಈ ಬೆನ್ನಲ್ಲೆ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬ ‘ಐ ಲವ್ ತಾಲಿಬಾನ್’ ಎಂದು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆಸೀಫ್ ಗಲಿಗಲಿ ಎಂಬಾತನೇ ಈ ರೀತಿ ಕಿಡಿಗೇಡಿ ಪೋಸ್ಟ್ ಹಾಕಿರುವುದು. ತಾಲಿಬಾನಿಗಳ ಹುಚ್ಚಾಟದ ವಿಡೀಯೋಗೆ ಆಸೀಫ್ ಗಲಿಗಲಿ ಎಂಬಾತ  ಐ ಲವ್  ತಾಲಿಬಾನ್ ಎಂದು ಕಾಮೆಂಟ್ ಮಾಡಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಪೋಸ್ಟ್ ಮಾಡಿರುವ ಕಿಡಿಗೇಡಿಯನ್ನ ಬಂಧಿಸುವಂತೆ ಆಗ್ರಹಿಸಿವೆ.

Key words: Facebook- I Love Taliban- man- post – demand – arrest