ರೈತರ ಸಾಲದ ಮರುಪಾವತಿ ಅವಧಿ ಕನಿಷ್ಟ 3 ತಿಂಗಳವರೆಗೆ ವಿಸ್ತರಿಸಿ- ಸಚಿವ ಎಸ್.ಟಿ ಸೋಮಶೇಖರ್ ಗೆ ಜಿ.ಡಿ.ಹರೀಶ್ ಮನವಿ…

ಮೈಸೂರು,ಏಪ್ರಿಲ್,29,2021(www.justkannada.in): ಕೊವಿಡ್- 19 ರ ಕಾರಣದಿಂದ ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಸಂಘಗಳ ಸಾಲಗಳ ಮರು ಪಾವತಿಯ ಅವಧಿಯನ್ನು 3 ತಿಂಗಳವರೆಗೆ ವಿಸ್ತರಿಸುವಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ  ಅಧ್ಯಕ್ಷ ಜಿ.ಡಿ ಹರೀಶ್ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಗೆ ಮನವಿ ಮಾಡಿದರು.jk

ಸಚಿವ ಎಸ್.ಟಿ ಸೋಮಶೇಖರ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ ಜಿ.ಡಿ ಹರೀಶ್ ಅವರು,  ನಮ್ಮ ಬ್ಯಾಂಕಿನಿಂದ 2020-21 ನೇ ಸಾಲಿನಲ್ಲಿ 80,368 ಜನ ರೈತರಿಗೆ ರೂ.74916.36 ಲಕ್ಷಗಳ ಕೆ.ಸಿ.ಸಿ. ಸಾಲ, 1129 ಜನ ರೈತರಿಗೆ ರೂ.2810.20 ಲಕ್ಷಗಳ ಮಧ್ಯಮಾವದಿ ಸಾಲ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಕಾಯಕ ಯೋಜನೆ ಯಡಿಯಲ್ಲಿ ಜೋಡಣೆ ಸಾಲ ನೀಡಿದ್ದು, ಈ ಸಾಲಗಳಿಗೆ ಸರ್ಕಾರದ ಬಡ್ಡಿ ಸಹಾಯಧನದ ಸೌಲಭ್ಯ ವಿರುತ್ತದೆ. ಆದರೆ ಈಗ ಕೋವಿಡ್ 19 ರ ಸಾಂಕ್ರಾಮಿಕ ರೋಗದ ಕಾರಣ ಈಗಾಗಲೇ 15 ದಿನಗಳ ಕಾಲ ಕರ್ಪೂ ಇದೆ, ಸಾಂಕ್ರಾಮಿಕ ರೋಗ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರಿಗೆ ಹಾಗೂ ಸ್ವ ಸಹಾಯ ಗುಂಪುಗಳಿಗೆ ಸಾಲ ಮರುಪಾವತಿ ಕಷ್ಟಕರವಾಗಿರುತ್ತದೆ.extend-farmers-loan-repayment-period-3-months-gd-harish-minister-st-somashekhar

ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ಸಾಲ ಸುಸ್ತಿಯಾದರೆ ಸುಸ್ತಿ ಸಾಲಗಳಿಗೆ ಸರ್ಕಾರದಿಂದ ಬಡ್ಡಿ ಸಹಾಯಧನ ದೊರೆಯುವುದಿಲ್ಲ. ಈ ರೀತಿಯಾದಲ್ಲಿ ರೈತರು ಸಾಲ ಪಡೆದ ದಿನಾಂಕದಿಂದ ಪೂರ್ಣ ಬಡ್ಡಿಯೊಡನೆ ಸಾಲ ಮರುಪಾವತಿಸಬೇಕಾಗುತ್ತದೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ: 30.06.2021 ರವರೆಗೆ ವಾಯಿದೆ ಇರುವ ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳ ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳವರೆಗೆ ವಿಸ್ತರಿಸಿ, ಈಗಾಗಲೇ ಕೋವಿಡ್-19 ರ ಸಂಕಷ್ಟದಲ್ಲಿರುವ ರೈತ ಹಾಗೂ ಸ್ವ ಸಹಾಯ ಗುಂಪುಗಳಿಗೆ ಇದು ಆರ್ಥಿಕವಾಗಿ ಸಹಾಯವಾಗುವುದರಿಂದ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಗೆ ಮನವಿ ಮಾಡಿದರು.

Key words: Extend – farmers’ loan- repayment- period – 3 months-GD Harish -Minister -ST Somashekhar.