ಚುನಾವಣೋತ್ತರ ಸಮೀಕ್ಷೆಯಲ್ಲಿ ಸತ್ಯಾಸತ್ಯತೆ ಕಾಣುತ್ತಿಲ್ಲ: ಬಿಜೆಪಿಗೆ ಇಷ್ಟು ಸ್ಥಾನ ಬರಬಹುದಷ್ಟೆ ಎಂದ್ರು ಸಚಿವ ಎಂ.ಬಿ ಪಾಟೀಲ್…

kannada t-shirts

ವಿಜಯಪುರ,ಮೇ,20,2019(www.justkannada.in): ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನ  ಮೂರು ದಿನವಷ್ಟೇ ಬಾಕಿಯಿದ್ದು,  ಎನ್ ಡಿಎ ಮುನ್ನಡೆ ಸಾಧಿಸಲಿದೆ ಎಂದು  ಚುನಾವಣೋತ್ತರ ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. ಇನ್ನೂ ನಮ್ಮದೇ ಗೆಲುವು, ನಮ್ಮ ಪಕ್ಷವೇ ಗೆಲವು ಸಾಧಿಸಲಿದೆ ಎಂದು  ವಿಶ್ವಾಸ ಹೊಂದಿದ್ದ ರಾಜಕೀಯ ನಾಯಕರಿಗೆ ಎಕ್ಟಿಟ್ ಪೋಲ್ ದೊಡ್ಡ ಶಾಕ್ ನೀಡಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ ಡಿಎಗೆ ಮುನ್ನಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್, ಎಕ್ಸಿಟ್ ಪೋಲ್ ಮೇಲೆ ನನಗೆ ನಂಬಿಕೆ ಇಲ್ಲ. ಚುನಾವಣೋತ್ತರ ಸಮೀಕ್ಷೆಯಲ್ಲಿ ಸತ್ಯಾಸತ್ಯತೆ ಕಾಣುತ್ತಿಲ್ಲ.  ನಮ್ಮ ಪ್ರಕಾರ ಎನ್ ಡಿಎ 200ರಿಂದ 225 ಸೀಟ್ ಪಡೆಯಬಹುದು ಅಷ್ಟೇ ಎಂದಿದ್ದಾರೆ.

48 ಗಂಟೆಯ ನಂತರ ಜನರ ಎಕ್ಸಿಟ್ ಪೋಲ್ ಹೊರ ಬೀಳಲಿದೆ. ಒಂದು ವೇಳೆ ಎಕ್ಸಿಟ್ ಪೋಲ್ ಸತ್ಯವಾದರೆ ಅದು ಜನರ ತೀರ್ಪಾಗುತ್ತೆ.  ಜನರ ತೀರ್ಪಿಗೆ ನಾವು ನಾವು ಬಾಗುತ್ತೇವೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆ 18 ಸೀಟ್ ಬರುವ ವಿಶ್ವಾಸ ಇದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

Key words: Exit poll do not seem to be true- minister MB patil

#politicalnews #election #mbpatil #vijayapura

website developers in mysore