EXCLUSIVE : ಚೀನಾ ವಿದ್ಯಾರ್ಥಿಗಳ ಸ್ಥಳಾಂತರ ಸೂಚನೆ : 10 ದಿನಗಳ ಮೊದಲೇ ಪರೀಕ್ಷೆಗೆ ಮುಂದಾದ ಮೈಸೂರು ವಿವಿ.

kannada t-shirts

 

ಮೈಸೂರು, ಮೇ 27, 2020 : ( www.justkannada.in news ) ಚೀನಾದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು 10 ದಿನಗಳ ಕಾಲ ಪ್ರೀಪೋನ್ ಮಾಡಿದೆ.

ಮೈಸೂರು ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ( MSc in Information Technology ) ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ನೂರಕ್ಕೂ ಹೆಚ್ಚು ವಿದೇಶಿ (ಚೀನಾ) ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳಿಗೆ ಜೂ. 15 ರಿಂದ ಪರೀಕ್ಷೆಗಳು ನಿಗಧಿಯಾಗಿದ್ದವು. ಆದರೆ ಚೀನಾದ ರಾಯಭಾರಿ ಕಚೇರಿ ಸೂಚನೆ ಹಾಗೂ ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಪರೀಕ್ಷೆಗಳನ್ನು 10 ದಿನಗಳ ಮೊದಲೇ ನಡೆಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ‘ ಜಸ್ಟ್ ಕನ್ನಡ ಡಾಟ್ ಇನ್ ‘  ಜತೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಹೇಳಿದಿಷ್ಟು…

ಚೀನಾ ರಾಯಭಾರ ಕಚೇರಿಯಿಂದ ಸೋಮವಾರ ದೂರವಾಣಿ ಕರೆ ಮಾಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳನ್ನು ಮರಳಿ ಸ್ವದೇಶಕ್ಕೆ ಕಳುಹಿಸುವಂತೆ ಕೋರಲಾಯಿತು. ಅದರಂತೆ ಆ ದೇಶದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜೂ. 15 ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆ ಆರಂಭಗೊಳ್ಳುವ ಬಗ್ಗೆ ಮಾಹಿತಿ ನೀಡಿದೆವು. ಆಗ, ಪಿಜಿ ಪರೀಕ್ಷೆಗಳನ್ನು 10 ದಿನಗಳ ಮೊದಲೇ ನಡೆಸುವಂತೆ ವಿನಂತಿಸಿಕೊಂಡರು. ಬಳಿಕ ಈ ಬಗ್ಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪರೀಕ್ಷೆಗಳನ್ನು ಪ್ರೀಪೋನ್ ಮಾಡಲು ನಿರ್ಧರಿಸಿದೆವು.

ಅದರಂತೆ ಜೂ. 1 ರಿಂದ ಆರಂಭಗೊಂಡು ಜೂ. 6 ಕ್ಕೆ ಇನ್ಫಾರ್ಮೇಷನ್ ಟೆಕ್ನಾಲಜಿ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆ ( ಚೀನಾ ವಿದ್ಯಾರ್ಥಿಗಳಿಗೆ ಮಾತ್ರ ) ಪೂರ್ಣಗೊಳ್ಳಲಿದೆ. ಬಳಿಕ ಜೂ.7 ಮತ್ತು 8 ರಂದು ಚೀನಾ ವಿದ್ಯಾರ್ಥಿಗಳು ಮೈಸೂರಿಂದ ಸ್ವದೇಶಕ್ಕೆ ಮರಳುವರು ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.

PG IT exams for Chinese students (Foreign Students) Advanced - University Of Mysore.

ಹಿನ್ನಲೆ :

ಚೀನೀ ರಾಯಭಾರ ಕಚೇರಿ ಸೋಮವಾರ, ಭಾರತದಲ್ಲಿ ನೆಲೆಸಿರುವ ತನ್ನ ನಾಗರಿಕರಿಗೆ ಅಗತ್ಯವಾದ ನೋಟಿಸ್ ಮೂಲಕ ತಮ್ಮ ಮನೆಗಳಿಗೆ ಮರಳಲು ವಿಶೇಷ ವಿಮಾನಗಳು ಲಭ್ಯವಿರುತ್ತವೆ ಎಂದು ತಿಳಿಸಿತ್ತು. ಜತೆಗೆ ಚೀನಾದ ವಿದೇಶಾಂಗ ಸಚಿವಾಲಯ ವಿಶೇಷವಾಗಿ ಚೀನಾಕ್ಕೆ ಹೋಗಲು ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ವಿವರವಾದ ಯೋಜನೆ ರೂಪಿಸಿರುವುದನ್ನು ಈ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಭಾರತ-ಚೀನಾ ನಡುವಿನ ಗಡಿ ಉದ್ವೇಗ್ನತೆಗೂ ಚೀನೀಯರನ್ನು ಭಾರತದಿಂದ ಸ್ಥಳಾಂತರಿಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚೀನಾದ ರಾಯಭಾರ ಕಚೇರಿ ಸೂಚಿಸಿದ್ದರೂ, ಭಾರತದ ಗಡಿಯಲ್ಲಿ ಇತ್ತೀಚಿನ ಉದ್ವಿಗ್ನತೆಯನ್ನು ತೆಗೆದುಕೊಂಡ ನಂತರವೇ ಈ ನೋಟೀಸ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದು ಉಹಾಪೋಹಗಳಿಗೆ ಎಡೆಮಾಡಿದೆ.

ಅಲ್ಲದೆ ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ (Covid-19) ಪ್ರಕರಣಗಳಿಂದಾಗಿ ಚೀನಾ ಸರ್ಕಾರ ತನ್ನ ನಾಗರಿಕರನ್ನು ಇಲ್ಲಿಂದ ಸ್ಥಳಾಂತರಿಸಲು ಬಯಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

 

key words : PG IT exams- for Foreign Students- Advanced – university of mysore.

ENGLISH SUMMARY : 

PG IT exams for Chinese students (Foreign Students) Advanced – University Of Mysore.

 

PG IT exams for Chinese students (Foreign Students) Advanced - University Of Mysore.
The University of Mysore (UOM) has advanced by 10 days the examinations for post-graduation students of Information Technology discipline which is meant for foreign nationals.
This is done on the request by the higher education department officials of the Chinese government. There are nearly 100 students who are doing a master’s degree in information technology, at the UoM. The examinations were scheduled from June 15. Following requests by the Chinese embassy and the higher education department’s officials of that country, the examinations would now be held 10 days ahead of the schedule.
Sharing this information with JustKannada.in, UoM Vice-Chancellor Hemanth Kumar said, “The Chinese embassy on Monday phoned us to permit Chinese students to return to their homeland. Following this, we had a video conference with the officials of the higher education department of China and informed them that the exams would begin from June 15 for the PG students. Then they requested us to advance the exams. Keeping the interest of the students, we have advanced the exams by 10 days.”

As per the revised schedule, the examinations for the MS in Information Technology meant for foreign nationals would commence from June 1 and conclude on June 6. The departure of Chinese students would be on June 7 and 8, the Vice-Chancellor said. This revised timetable is applicable only for foreign students.

website developers in mysore