EXCLUSIVE : ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕಾಲೇಜು ಆರಂಭಕ್ಕೆ ಮೈಸೂರು ವಿವಿ ಸಿಂಡಿಕೇಟ್ ಅನುಮೋದನೆ.

 

ಮೈಸೂರು, ಆ.23, 2019 : (www.justkannada.in news) : ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಡಿ ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕಾಲೇಜು ಆರಂಭಿಸಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಿಂಡಿಕೇಟ್ ಸಭೆಯ ಪ್ರಮುಖ ಅಂಶಗಳ ಬಗ್ಗೆ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿದು ಹೀಗೆ….

ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲೇ 10 ಎಕರೆ ಪ್ರದೇಶದಲ್ಲಿ ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕಾಲೇಜು ಆರಂಭಿಸುವುದು. ಸ್ಕೂಲ್ ಆಫ್ ಆರ್ಕಿಟೆಕ್ ಸಮೀಪದ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ. ಎಂಜಿಯರಿಂಗ್ ಕಾಲೇಜು ಪ್ರವೇಶಾತಿಯಲ್ಲಿ ಶೇ 50 ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡುವುದು. ಉಳಿದ ಶೇ.50 ರಷ್ಟನ್ನು ರಾಷ್ಟ್ರೀಯ ಪರೀಕ್ಷೆ ಮೂಲಕ ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಸೀಟು ನೀಡುವುದು.
5 ವಿಭಾಗಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಲು ಉದ್ದೇಶಿಸಿದ್ದು, ಮಾಮೂಲಿ ವಿಭಾಗಗಳ ಬದಲಿಗೆ ಪ್ರಸ್ತುತ ಚಾಲ್ತಿಯಲ್ಲಿರುವ, ಬೇಡಿಕೆಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್ ಆರಂಭಿಸಲು ತೀರ್ಮಾನ. ಈ ಸಂಬಂಧ ತಜ್ಞರ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

ಇ-ಮೀಟಿಂಗ್ :
ಮೈಸೂರು ವಿವಿ ಆಡಳಿತ ವ್ಯವಸ್ಥೆಯನ್ನು ಪೇಪರ್ ರಹಿತವಾಗಿಸುವ ನಿಟ್ಟಿನಲ್ಲಿ ಇ-ಮೀಟಿಂಗ್ ಪದ್ಧತಿ ಜಾರಿಗೆ ಮುಂದಾದ ಕುಲಪತಿ ಪ್ರೊ.ಹೇಮಂತ್ ಕುಮಾರ್. ಮುಂದಿನ ಸಭೆಗಳಲ್ಲಿ ಟಾಬ್, ಲ್ಯಾಪ್ ಟಾಪ್ ಗಳ ಮೂಲಕವೇ ಸಂಪರ್ಕ ಸಾಧಿಸಿ ಸಭೆಯ ನಡಾವಳಿ ದಾಖಲಿಸಲಾಗುತ್ತದೆ.

ಹೊಸ ಹಾಸ್ಟೆಲ್ :
ಮೈಸೂರು ವಿವಿಯಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ರಿಸರ್ಚ್ ಸ್ಕಾಲರ್ಸ್ ಗೆಂದೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲು ಸಿಂಡಿಕೇಟ್ ಹಸಿರು ನಿಶಾನೆ ನೀಡಿದೆ. 150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ 75 ಕೊಠಡಿಗಳ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ.

ಕೆರಿಯರ್ ಹಬ್ :
ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಪ್ಲೆಸ್ಮೆಂಟ್ ತರಬೇತಿ ಕೇಂದ್ರ ಆರಂಭಿಸಲು ವಿಶ್ವವಿದ್ಯಾನಿಲಯ ಮುಂದಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಕೇಂದ್ರ ಸರಕಾರದ ‘ರೂಸ’ ಅನುದಾನದಡಿ ಈ ಯೋಜನೆ ಜಾರಿಗೆ ಬರಲಿದೆ. ನಂತರ ವಿವಿಧ ಕೈಗಾರಿಕೋದ್ಯಮಿಗಳು, ಕಂಪನಿಗಳಿಗೆ ಆಹ್ವಾನ ನೀಡಿ ಕ್ಯಾಂಪಸ್ ಆಯ್ಕೆಗೆ ಅವಕಾಶ ನೀಡಲಾಗುತ್ತದೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

key words : Mysore university syndicate approves to open new Engineering and Pharmacy college.

SUMMARY :

The syndicate has approved the opening of the College of Engineering and Pharmacy under the prestigious Mysore University from the next academic year.
Mysore Vice Chancellor Prof. Hemant Kumar presided over the syndicate meeting held on Friday.
Establishment of College of Engineering and Pharmacy on 10 acres of campus at Manasa Gangotri campus. Reserve 50% seats in engineering college admission for students in Karnataka