​ ಕೆಲಸ ಕೊಡಿಸುವುದಾಗಿ ಹೇಳಿ ಕೆಪಿಎಸ್ ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ 10 ಲಕ್ಷ ರೂ ವಂಚನೆ

kannada t-shirts

ಬೆಂಗಳೂರು:ಮೇ-14:(www.justkannada.in) ಕೆಪಿ ಎಸ್ ಸಿ ಅಧ್ಯಕ್ಷ ಶ್ಯಾಂಭಟ್ ಹೆಸರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 10 ಲಕ್ಷ ರೂ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಿಎಆರ್​ನ ನಿವೃತ್ತ ಆರ್​ಎಸ್​ಐ ಸಿದ್ದಯ್ಯ  ಆರೋಪಿಸಿದ್ದಾರೆ.

ಕೆಪಿ ಎಸ್ ಸಿ ಅಧ್ಯಕ್ಷ ಶ್ಯಾಭ್ ಅವರಿಗೆ ಹೇಳಿ ತಮ್ಮ ಮಗನಿಗೆ ಅಬಕಾರಿ ಇನ್​ಸ್ಪೆಕ್ಟರ್​ ಕೆಲಸ ಕೊಡಿಸುವುದಾಗಿ ಹೇಳಿ ಧನರಾಜ್ ಹಾಗೂ ಪ್ರದೀಪ್  ಇಬ್ಬರು 10 ಲಕ್ಷ ರೂ ಪಡೆದಿದ್ದಾನೆ ಎಂದು ಸಿಎಆರ್​ನ ನಿವೃತ್ತ ಆರ್​ಎಸ್​ಐ ಸಿದ್ದಯ್ಯ ಉಪ್ಪಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಮ್ಮ ಪುತ್ರ ನಾಗೇಂದ್ರನಿಗೆ ಅಬಕಾರಿ ಇನ್​ಸ್ಪೆಕ್ಟರ್​ ಹುದ್ದೆ ಕೊಡಿಸಲು ನೆರವಾಗುವುದಾಗಿ ಧನ್​ರಾಜ್ ಮತ್ತು ಪ್ರದೀಪ್​ ನಂಬಿಸಿದ್ದರು. ತನಗೆ 20 ಲಕ್ಷ ರೂ. ಕೊಡುವುದಾದರೆ ಶ್ಯಾಂ ಭಟ್​ ಅವರನ್ನು ಪರಿಚಯಿಸಿ ಕೆಲಸ ಕೊಡಿಸೋದಾಗಿ ಧನರಾಜ್ ಹೇಳಿದ್ದ. ಅದರಂತೆ ಗಾಂಧಿನಗರದ ದಿವಾ ರೆಸಿಡೆನ್ಸಿ ಹೋಟೆಲ್​ನಲ್ಲಿ ಧನ್​ರಾಜ್​ಗೆ ಮೊದಲ ಕಂತಿನ 4.5 ಲಕ್ಷ ರೂ. ಕೊಟ್ಟಿದ್ದೆ. ಬಳಿಕ 5.50 ಲಕ್ಷ ರೂ. ಹಣವನ್ನು ಅವರಿಗೆ ಕೊಟ್ಟಿದ್ದೆ. ಹೀಗೆ ಒಟ್ಟು 10 ಲಕ್ಷ ರೂ. ಪಡೆದ ಆತ, ಕೆಪಿಎಸ್​ಸಿ ಪ್ರಕಟಿಸುವ 2ನೇ ಲಿಸ್ಟ್​ನಲ್ಲಿ ತಮ್ಮ ಪುತ್ರನ ಹೆಸರಿರುತ್ತದೆ ಎಂದು ಭರವಸೆ ನೀಡಿದ್ದ. ಆದರೆ ಲಿಸ್ಟ್​ ಪ್ರಕಟವಾದರೂ ನನ್ನ ಪುತ್ರನ ಹೆಸರು ಇರಲಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಮ್ಮಿಂದ ಪಡೆದಿರುವ 10 ಲಕ್ಷ ರೂ. ಹಣವನ್ನು ಶ್ಯಾಂ ಭಟ್​ ಅವರಿಗೆ ಕೊಟ್ಟಿರುವುದಾಗಿ ಆತ ಹೇಳುತ್ತಿದ್ದಾನೆ. ಆದರೆ, ಕೆಲಸವೂ ಆಗಿಲ್ಲ. ಹಾಗಾಗಿ ದೂರಿನಲ್ಲಿ ಶ್ಯಾಂ ಭಟ್​ ಹಾಗೂ ಧನ್​ರಾಜ್​  ಹಾಗೂ ಪ್ರದೀಪ್  ವಿರುದ್ಧವೂ ದೂರು ದಾಖಲಿಸಿದ್ದಾರೆ.

Excise Inspector,KPSC Shaym Bhat,Siddaiah,person loses Rs 10 lakhs

website developers in mysore