ಸಿದ್ದು-ಜಿಟಿಡಿ ಲವ್ ಬರ್ಡ್ಸ್ ಥರ ! ಯಾವಾಗ ಲವ್ ಆಗುತ್ತೆ? ಯಾವಾಗ ಡಿವೋರ್ಸ್ ಆಗುತ್ತೆ ಅವ್ರೀಗೆ ಗೊತ್ತು: ಸಚಿವ ಎಸ್’ಟಿಎಸ್

ಮೈಸೂರು, ನವೆಂಬರ್ 30, 2021 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ-ಜಿಟಿ ದೇವೇಗೌಡ ಇಬ್ಬರೂ ಒಂದು ರೀತಿ ಲವ್ ಬರ್ಡ್ಸ್ ಥರ‌. ಇಬ್ಬರಿಗೂ ಯಾವಾಗ ಲವ್ ಆಗುತ್ತೆ, ಯಾವಾಗ ಡಿವೋರ್ಸ್ ಆಗುತ್ತೆ ಅವ್ರೀಗೆ ಗೊತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅಂತಾ ಪೂಜೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಪೂಜೆ ಮಾಡಿದ ತಕ್ಷಣ ಮುಖ್ಯಮಂತ್ರಿ ಆಗಲ್ಲ ಎಂದರು.

ಪೂಜೆ ಮಾಡಿ ಮುಖ್ಯಮಂತ್ರಿ ಆಗೋ ಆಗಿದ್ದೆ ಎಲ್ಲರೂ ಪೂಜೆ ಮಾಡಿಸ್ತಾ ಇದ್ರು. ದೇವಸ್ಥಾನ ಪೂಜೆಗೆ ಅಹ್ವಾನ ನೀಡಿದ್ದಾರೆ, ಹೀಗಾಗಿ ಅವ್ರು ಜೊತೆಯಾಗಿ ಹೋಗಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.