ಒತ್ತಡ, ಖಿನ್ನತೆ, ಉತ್ಸಾಹದ ಕುರಿತು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಸಲಹೆ

Promotion

ಬೆಂಗಳೂರು, ಅಕ್ಟೋಬರ್ 10, 2022 (www.justkannada.in): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಆಟಗಾರರ ಖಿನ್ನತೆ ಕುರಿತು ಮಾತನಾಡಿದ್ದು, ಸಾಕಷ್ಟು ಸುದ್ದಿಯಾಗಿದೆ.

ಖಾಸಗಿ ಸಂಸ್ಥೆಯ ಚರ್ಚೆಯಲ್ಲಿ ಮಾತನಾಡಿದ ಕಪಿಲ್, ನಿಮಗೆ ಅಷ್ಟೊಂದು ಒತ್ತಗಳಿದ್ರೆ ನೀವು ಆಡುವುದೇ ಬೇಡ ಎಂದು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಟಗಾರರು ಐಪಿಎಲ್ ನಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ ಎನ್ನುತ್ತಾರೆ. ನಿಮಗೆ ಅಷ್ಟೊಂದು ಒತ್ತಗಳಿದ್ರೆ ನೀವು ಆಡುವುದೇ ಬೇಡ ಎಂದು ಸಲಹೆ ನೀಡಿದ್ದಾರೆ.

ನಿಮಗೆ ಆಡುವ ಉತ್ಸಾಹವಿರಬೇಕು. ಆಗ ಯಾವುದೇ ಒತ್ತಡಗಳು ಇರುವುದಿಲ್ಲನೀವು ಆಡುವ ಉತ್ಸಾಹವನ್ನು ಹೊಂದಿದ್ರೆ ಯಾವುದೇ ರೀತಿಯ ಒತ್ತಡಗಳು ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.