ಅನರ್ಹ ಶಾಸಕರನ್ನು ಸೋಲಿಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಟ್ಟ ಸಂಸ್ಕೃತಿಕ ವಿದಾಯ ಹೇಳಿ: ಮಾಜಿ ಸಿಎಂ ಎಚ್ಡಿಕೆ

ಬೆಳಗಾವಿ, ಡಿಸೆಂಬರ್ 01, 2019 (www.justkannada.in): ಗೋಕಾಕ್ ನಲ್ಲಿರುವ ಸಾಹುಕಾರಿಕೆ ದೌಲತ್ತನ್ನು ತೊಲಗಿಸಬೇಕೆಂದು ದೇವರ ಕಲ್ಪಿಸಿರುವಂತಹ ಚುನಾವಣೆ ಇದಾಗಿದ್ದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಗೋಕಾಕ್ ನಲ್ಲಿ ಮಾತನಾಡಿದ ಅವರು, ಗೋಕಾಕ್ ಉಪಚುನಾವಣೆಯಲ್ಲಿ ಅಶೋಕ್ ಪೂಜಾರಿ ಗೆಲುವು ಶತಸಿದ್ಧ. ಡಿಸೆಂಬರ್ 9 ರಂದು ಫಲಿತಾಂಶ ಬರುತ್ತದೆ. ಏನಾಗುತ್ತೆ ನೋಡೋಣ. ಫಲಿತಾಂಶದ ಬಳಿಕ ಹೊಸ ಬೆಳವಣಿಗೆ ನಡೆಯುತ್ತವೆ. ಯಾರ ಪರ ಮತ್ತು ವಿರೋಧ ಒಲವು ನನಗೆ ಇಲ್ಲ. ಕಷ್ಟದಲ್ಲಿರುವ ಜನರು ಬದುಕು ಕಟ್ಟಿಕೊಳ್ಳಲು ಹೊಸ ಸರ್ಕಾರದ ಅವಶ್ಯಕತೆ ಇದೆ. ದೇವರ ತೀರ್ಮಾನದಂತೆ ಚುಣಾವಣೆ ನಡೆಯುತ್ತಿದೆ ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ 6-8 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. 15 ಅನರ್ಹ ಶಾಸಕರು ಸೋಲಬೇಕು. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ಮಾಡುತ್ತಿದ್ದಾರೆ. ಒಂದು ಪಕ್ಷದಿಂದ ಆಯ್ಕೆಯಾಗಿ ರಾಜೀನಾಮೆ ಕೊಡುವ ಕೆಟ್ಟ ಸಂಸ್ಕೃತಿಗೆ ಇತಿಶ್ರೀ ಹಾಡಬೇಕು ಎಂದು ಹೇಳಿದರು.