ಇವಿಎಂಗಳೆಲ್ಲಾ  ಈಗ  ‘ಮೋದಿ ವೋಟಿಂಗ್ ಮೆಶೀನ್’ – ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯ…

kannada t-shirts

ಮೈಸೂರು, ನವೆಂಬರ್,17,2020(www.justkannada.in): ಎಲೆಕ್ಟ್ರಾನಿಕ್ ವೋಟಿಂಗ್ ಮೆಶೀನ್ ಗಳೆಲ್ಲಾ ಈಗ ಮೋದಿ ವೋಟಿಂಗ್ ಮೆಶೀನ್  ಗಳಾಗಿವೆ. ಇವಿಎಮ್  ಅಲ್ಲ ಅವು ಎಮ್ ವಿಎಮ್ ಆಗಿವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.kannada-journalist-media-fourth-estate-under-loss

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಇವಿಎಮ್ ದುರ್ಬಳಕೆ ವಿರುದ್ಧ ಕಿಡಿಕಾರಿದ ಎಂ. ಲಕ್ಷ್ಮಣ್, ನಮಗೆ ಇವಿಎಂ ಗಳ ಮೇಲೆ ನಂಬಿಕೆ ಇಲ್ಲ. ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲಟ್ ಪೇಪರ್ ಗಳನ್ನು ಬಳಸಿ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗಕ್ಕೆ ಲಕ್ಷ್ಮಣ್ ಮನವಿ ಮಾಡಿದರು.

ಬಿಹಾರದಲ್ಲಿ ಮಹಾಘಟಬಂಧನ್ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುತ್ತವೆ ಎಂದೂ ಎಲ್ಲಾ ಸಮೀಕ್ಷೆಗಳು ವರದಿ ಮಾಡಿದ್ದವು. ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡಿದಿದೆ ಅಂದರೇನರ್ಥ..? ಬಿಜೆಪಿ ಇವಿಎಮ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.condemnation-electricity-price-hike-congress-spokesperson-m-laxman-government

ಹಾಗೆಯೇ ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಳಸಲಾದ ಇವಿಎಂ ಗಳನ್ನು ಯಾವ ರಾಜ್ಯದಿಂದ ತರಿಸಲಾಗಿತ್ತು..? ಎಂದು ಬಿಜೆಪಿಗೆ ಪ್ರಶ್ನಿಸಿದ ಎಂ. ಲಕ್ಷ್ಮಣ್ ,  ಇವಿಎಂ ಅನ್ನ ಬಿಜೆಪಿ ಅಧಿಕಾರ ನಡೆಸುವ ರಾಜ್ಯಗಳಿಂದ ತರಿಸಲಾಗಿತ್ತು. ಅಮೆರಿಕಾ ಅಂತಹ ರಾಷ್ಟ್ರವೇ ಬ್ಯಾಲಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸುತ್ತದೆ. ನಾವು ಇವಿಎಮ್ ವಿರುದ್ಧವಾಗಿದ್ದೇವೆ, ಅದನ್ನು ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಇವಿಎಮ್ ವಿರುದ್ಧ ದೊಡ್ಡ ಜನಾಂದೋಲನವನ್ನೇ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

English summary….

All EVMs are now ‘Modi Voting Machines’ – KPCC spokesperson M. Lakshman
Mysuru, Nov. 17, 2020 (www.justkannada.in): Addressing a press meet held at the Indira Gandhi Congress Bhavan here today, KPCC Spokesperson M. Lakshman alleged that all the Electronic Voting Machines have become MVM (Modi Voting Machines).condemnation-electricity-price-hike-congress-spokesperson-m-laxman-government
Expressing his ire on misuse of EVMs he said that nobody have trust on EVMs and demanded to reintroduce ballot papers.
“In Bihar almost all the pre-poll surveys had predicted that the Mahaghatbandan would win more seats, but the results were surprising! what does this mean!? Doesn’t this mean the BJP has been misusing EVMs?, he alleged.
“The EVMs that were used for voting in the recently held Sira and R.R. Nagar byelections were brought from BJP run states. While a superpower nation like America is using ballot papers for elections why should we use EVMs,” he questioned. He also demanded the authority concerned to ban EVMs and also threatened of organizing a massive protest from Congress party against EVMs.
Keywords: EVM-BJP-Modi Voting Machines-MVM

Key words: EVMs -Now -Modi Voting Machine – KPCC spokesman-M Laxman- irony

website developers in mysore