ಸಿಡಿ ಕೇಸ್ ನಲ್ಲಿ ಮಹಾನಾಯಕನ ಕೈವಾಡ ಬಗ್ಗೆ ಸಾಕ್ಷ್ಯ ಇದೆ: ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ- ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ.  

Promotion

ಬೆಳಗಾವಿ,ಜನವರಿ,25,2023(www.justkannada.in):  ಸಿಡಿ ಪ್ರಕರಣದಲ್ಲಿ ಮಹಾನ್ ನಾಯಕನ ಕೈವಾಡ ಇರುವ ಬಗ್ಗೆ ಸಾಕ್ಷ್ಯ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿ ಚರ್ಚಿಸಿ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಇನ್ಮುಂದೆ ಡಿಕೆ ಶಿವಕುಮಾರ್ ವೈಯಕ್ತಿಕ ವಿಚಾರ ಮಾತನಾಡಬೇಕಾಗುತ್ತದೆ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಸಿಡಿ ಕೇಸ್ ನಲ್ಲಿ ಮಹಾನಾಯಕನ ಕೈವಾಡ ಇರುವ ಸಾಕ್ಷಿ ಇದೆ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸುತ್ತೇನೆ. ಸಿಡಿ ಇಟ್ಟು ಕೆಲಸ ಮಾಡುತ್ತೇನೆ ಎಂದಿದ್ದಾರೆ. ಸಿಡಿ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

’ ಸಿಡಿ ಖೇಸ್  ಇಬ್ಬರು ಆರೋಪಿಗಳು ಶೀರಾ, ದೇವನಹಳ್ಳಿಯವರು ದೇವನಹಳ್ಳಿ ನಿವಾಸದ ಮೇಲೆ  ದಾಳಿಯಾದಾಗ 90 ರಿಂದ 110 ಸಿಡಿ ಸಿಕ್ಕಿವೆ.  ಇಡೀ ರಾಜ್ಯದ ಜನರ ಸಿಡಿಗಳು ಸಿಕ್ಕಿವೆ. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಭೇಟಿಯಾಗುತ್ತೇನೆ ಬಹಳಷ್ಟು ಜನರನ್ನ ಬ್ಲಾಕ್ ಮೇಲ್ ಮಾಡಲು ರೆಡಿಯಾಗಿದ್ದಾನೆ ಇಂತಹ ನೂರು ಸಿಡಿ ಬರಲಿ.  ನಾನು ಗಟ್ಟಿಯಾಗಿರುತ್ತೇನೆ ಎಂದು ಡಿಕೆಶಿವಕುಮಾರ ವಿರುದ್ದ ವಾಗ್ದಾಳಿ ನಡೆಸಿದರು.

Key words: evidence – CD ca-. Ramesh Jarakiholi –against-DK Shivakumar