ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ; ಸಿಎಂ ಬಿಎಸ್ ವೈಗೆ ಸಚಿವರು, ಶಾಸಕರಿಂದ ಅಭಿನಂದನೆ….

ಬೆಂಗಳೂರು,ಮಾರ್ಚ್,9,2021(www.justkannada.in):  2021 ನೇ ಸಾಲಿನ ಆಯವ್ಯಯದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಂಪುಟದಲ್ಲಿರುವ ಒಕ್ಕಲಿಗ ಸಮುದಾಯದ ಎಲ್ಲ ಸಚಿವರು, ಶಾಸಕರು ಹಾಗೂ ಮುಖಂಡರು ಅಭಿನಂದಿಸಿದರು.jk

ವಿಧಾನಸೌಧದಲ್ಲಿ ಮಂಗಳವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಸನ್ಮಾನಿಸಿದ ಸಚಿವರು, ನಿಗಮ ಸ್ಥಾಪನೆಗಾಗಿ ಅಭಿನಂದಿಸಿದರಲ್ಲದೆ ಆದಷ್ಟು ಶೀಘ್ರವೇ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

ಮುಂಗಡ ಪತ್ರದಲ್ಲಿಯೇ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿದ ಬಗ್ಗೆ ಸಮುದಾಯದ ಎಲ್ಲ ಸ್ವಾಮೀಜಿಗಳಿಗೆ, ಹಿರಿಯರಿಗೆ, ಮುಖಂಡರಿಗೆ ಸಂತೋಷವಾಗಿದೆ ಎಂಬ ಸಂಗತಿಯನ್ನು ಡಿಸಿಎಂ ಅಶ್ವತ್ಥನಾರಾಯಣ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಅಭಿನಂದನೆ ಸ್ವೀಕರಿಸಿದ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಅವರೂ ಸಂತೋಷ ವ್ಯಕ್ತಪಡಿಸಿದರಲ್ಲದೆ, ಆದಷ್ಟು ಬೇಗ ನೂತನ ನಿಗಮಕ್ಕೆ ಸಮರ್ಥ ಅಧ್ಯಕ್ಷರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರು.establishment-vokkaliga-development-corporation-congratulations-cm-bs-yeddyurappa-minister-mla

ಈ ಸಂದರ್ಭದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ನಾರಾಯಣಗೌಡ, ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕರಾದ ಕೆ.ಜೆ.ಬೋಪಯ್ಯ, ಅರಗ ಜ್ಞಾನೇಂದ್ರ, ಡಾ.ರಾಜೇಶ್ ಗೌಡ, ಮಸಾಲೆ ಜಯರಾಂ, ಪರಿಷತ್ ಸದಸ್ಯ ಪುಟ್ಟಣ್ಣ ಮುಂತಾದವರು ಇದ್ದರು.

ENGLISH SUMMARY…

Ministers, MLAs lauds CM BSY for establishing Vokkaliga Development Corporation
Bengaluru, Mar. 9, 2021 (www.justkannada.in): Minister and MLAs belonging to the Vokkaliga community in the State Cabinet have appreciated Chief Minister B.S.Yedyurappa announced to establishment the Vokkaliga Development Corporation in the 2021 budget speech.
A team of leaders led by Deputy Chief Minister Dr.C.N. Ashwathnarayan, Revenue Minister R. Ashok felicitated B.S.Yedyurappa on Tuesday at the Vidhana Soudha appreciating him for announcing the establishment of the Vokkaliga Development Corporation and also urged him to appoint a Chairman for the Corporation as soon as possible.establishment-vokkaliga-development-corporation-congratulations-cm-bs-yeddyurappa-minister-mla
Ministers D. K. Sudhakar, K. Gopalaiah, Narayanagowda, Chief Minister’s Political Secretary Jeevraj, MLAs K.J. Bopaiah, Araga Jnanendra, Dr. Rajesh Gowda, Masale Jayaram, MLC Puttanna, and others were present.
Keywords: CM BSY/ CM appreciated for announcing/ budget speech/ Vokkaliga Development Corporation

Key words: Establishment –vokkaliga- Development-Corporation- Congratulations – CM BS Yeddyurappa- Minister -MLA.