ನಮ್ಮ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಸಮಾಜದಿಂದ‌ ಬೃಹತ್ ಪ್ರತಿಭಟನೆ….

kannada t-shirts

ಬೆಂಗಳೂರು,ಡಿ,17,2019(www.justkannada.in): ಹಡಪದ (ಕ್ಷೌರಿಕ) ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಇಂದು ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಟೌನ್ ಹಾಲ್ ಮುಂದೆ ಜಮಾಯಿಸಿದ  ಸಾವಿರಾರು ಜನರು  ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸಿದರು.

ಸಿಎಂ  ಯಡಿಯೂರಪ್ಪ, ರಾಜ್ಯಸರ್ಕಾರದ ಮುಂದೆ ಪ್ರತಿಭಟನಾಕಾರರು ಇಟ್ಟಿರುವ ಬೇಡಿಕೆ ಈ ಕೆಳಕಂಡಂತಿದೆ…

  1. ಹಡಪದ (ಕ್ಷೌರಿಕ) ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು
  2. ನಿಷೇಧ ಮಾಡಿರೋ ಹಜಾಮ ಪದ ಬಳಕೆ ಮಾಡುವವರ ವಿರುದ್ಧ ಅಟ್ರಾಸಿಟಿ ಕಾನೂನು ಜಾರಿಗೊಳಿಸಬೇಕು
  3. ಹಡಪದ ಅಪ್ಪಣ್ಣ ಜನ್ಮಸ್ಥಳವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿಪಡಿಸಬೇಕು
  4. ಹಡಪದ ಹಿಂದುಳಿದ ಸಮಾಜವಾಗಿದ್ದು ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭಿಸಲು ನಗರದಲ್ಲಿ 5 ಎಕರೆ ಜಾಗ ಮಂಜೂರು ಮಾಡಬೇಕು
  5. ಹಡಪದ ಸಮಾಜದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು
  6. ಹಳ್ಳಿಗಳಲ್ಲಿ ಕ್ಷೌರ ಮಾಡಲು ಕ್ಷೌರಿಕ ಕುಟೀರಗಳನ್ನು ನಿರ್ಮಾಣ ಮಾಡಿಕೊಡಬೇಕು
  7. ಕ್ಷೌರಿಕ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು

ಹೀಗೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.

Key words: Establish – separate development -corporation – protests – All Karnataka hadapada community

website developers in mysore