ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತದೆ ಅನ್ನೋದು ಸುಳ್ಳು : ಪ್ರಮೋದ್ ಮುತಾಲಿಕ್ 

ಬೆಂಗಳೂರು,ನವೆಂಬರ್,07,2020(www.justkannada.in) : ಪಟಾಕಿ ಬ್ಯಾನ್ ಮಾಡಬೇಕು ಅನ್ನೋದು ಸರಿಯಲ್ಲ. ಪಟಾಕಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಅನ್ನೋದು ಸುಳ್ಳು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್  ಹೇಳಿದ್ದಾರೆ.jk-logo-justkannada-logo

ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೊರೊನಾ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಬಾರದೆಂದು ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿ ಆದೇಶಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ.

ವಾಹನದಿಂದ ಎಷ್ಟು ಮಾಲಿನ್ಯವಾಗುತ್ತಿದೆ

ವಾಹನದಿಂದ ಎಷ್ಟು ಮಾಲಿನ್ಯವಾಗುತ್ತಿದೆ . ಸರಕಾರ ಅದನ್ನು ತಡೆಯಲಿ. ಕಾನೂನು ಮಾಡುವವರು ಅರಣ್ಯ ಪ್ರದೇಶಕ್ಕೆ ಹೋಗಿ ನೋಡಿದ್ರೆ ಪರಿಸರ ಎಷ್ಟು ಹಾಳು ಮಾಡಿದ್ದೀರಿ ಅಂತಾ ಗೊತ್ತಾಗುತ್ತೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್ ಮಾಡಬಾರದು

ದೀಪಾವಳಿ ವೇಳೆ ಪಟಾಕಿ ಹಚ್ಚಿದರೆ ತೊಂದರೆಯಿಲ್ಲ. ಧಾರ್ಮಿಕ ವಿಧಿ ವಿಧಾನದಿಂದ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್ ಮಾಡಬಾರದು ಎಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

Environment-fireworks-Pollution-lie-Pramod Muthalik

key words : Environment-fireworks-Pollution-lie-Pramod Muthalik