ರಾಜ್ಯದಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಘೋಷಿಸಲಿ : ರೈತ ಮುಖಂಡ ಕುರುಬೂರು ಶಾಂತಕುಮಾರ್

ಮೈಸೂರು,ಅಕ್ಟೋಬರ್,18,2020(www.justkannada.in) :  ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅತಿವೃಷ್ಟಿ ನದಿ ಪ್ರವಾಹ ಬೆಳೆನಷ್ಟ ಹಳ್ಳಿಗಳ ಮುಳುಗಡೆ ಬಗ್ಗೆ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.jk-logo-justkannada-logoಕಳೆದ ವರ್ಷ ಅತಿವೃಷ್ಟಿ ಹಾನಿಯಿಂದ 35 ಸಾವಿರ ಕೋಟಿ ರೂ. ಉತ್ತರ ಕರ್ನಾಟಕ ಭಾಗದಲ್ಲಿ ನಷ್ಟ ಅನುಭವಿಸಿದ್ದಾರೆ. ಕಳೆದ 2-3 ತಿಂಗಳಿಂದ ಸುರಿಯುತ್ತಿರುವ ಭೀಕರ ಮಳೆ ಪ್ರವಾಹ ದಿಂದ, ಭೀಮಾ ನದಿ, ಕೃಷ್ಣಾ ನದಿ ನೀರಿನ ಪ್ರವಾಹದಿಂದ 10 ಲಕ್ಷ ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಕಬ್ಬು, ಹತ್ತಿ, ಮೆಕ್ಕೆಜೋಳ, ಬಾಳೆ ಮತ್ತಿತರ ಬೆಳೆಗಳು ಸಾವಿರಾರು ಗ್ರಾಮಗಳು ನೀರಿನಲ್ಲಿ ಮುಳುಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ರಾಜ್ಯದ 25ಸಂಸದರು ನಿದ್ರಿಸುತ್ತಿದ್ದಾರೆ

ಈ ಗ್ರಾಮಗಳ ಜನರನ್ನು ಒಂದು ವಾರವಾದರೂ ಭೇಟಿ ಮಾಡುವ ಸೌಜನ್ಯವನ್ನು ಸರ್ಕಾರದ ಯಾವುದೇ ಅಧಿಕಾರಿಗಳು ಮಾಡಿಲ್ಲ. ಜನಪ್ರತಿನಿಧಿಗಳು ದಿಕ್ಕೆಟ್ಟಿದ್ದಾರೆ, ರೈತರ ಬಾಳು ನರಕವಾಗಿದೆ, ರಾಜ್ಯದ 25ಸಂಸದರು ನಿದ್ರಿಸುತ್ತಿದು, ಕೇಂದ್ರವನ್ನು ಎಚ್ಚರಿಸುವ ಯಾವುದೇ ಕಾರ್ಯ ನಡೆಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸಚಿವರ ತಂಡ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿ ಅರಿಯಲಿ 

ಕೇಂದ್ರ ಸರ್ಕಾರ ಪದೇಪದೇ ರಾಜ್ಯದ ಬಗ್ಗೆ ನಿರ್ಲಕ್ಷ ಧೋರಣೆ ತಾಳುತಿದೆ. ಕಳೆದ ವರ್ಷ 35 ಸಾವಿರ ಕೋಟಿ ನಷ್ಟಕ್ಕೆ ಕೇವಲ ಮೂರು ಸಾವಿರ ಕೋಟಿ ನೀಡಿ ತೇಪೆ ಹಾಕಿದ್ದಾರೆ. ಈಗಲಾದರೂ ಕೇಂದ್ರ ಸಚಿವರ ತಂಡ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿಯನ್ನು ಅರಿತು ಇದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲಿ ಎಂದು ಒತ್ತಾಯಿಸಿದ್ದಾರೆ.

ದಸರಾ, ಅಬ್ಬರದ ಚುನಾವಣೆಯಲ್ಲಿ ನೊಂದ ಜನರ ಗೋಳು ಕೇಳುವವರಾರುcentral-government-declare-national-disaster-state-Farmer-leader-Kuruburu Shanthakumar

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದಸರಾ ಆಚರಣೆ, ಅಬ್ಬರದ ಚುನಾವಣೆ ಬಗ್ಗೆ ಕಾಳಜಿವಹಿಸುವ ಬದಲು ನೊಂದ ಜನರ ರಕ್ಷಣೆಗೆ ಸರ್ಕಾರ ಸಮಾರೋಪದಿಯದಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿ. ಕೇಂದ್ರ ಸರ್ಕಾರ ಕೃಷಿಕ್ಷೇತ್ರವನ್ನು ನಾಶಮಾಡುವ ಕಾಯ್ದೆಗಳನ್ನು ಜಾರಿಗೆ ತರುವ ಬದಲು ಡಾ ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ ಶಾಸನಬದ್ಧ ದರ ಮಾನದಂಡ ಜಾರಿಗೆ ತರಲಿ ಎಂದರು.

ಎಫ್ ಆರ್ ಪಿ ದರ ಆವೈಜ್ಞಾನಿಕ

ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ಬೆಲೆ ನಿಗದಿ ಮಾನದಂಡ ಜಾರಿಯಾದ ಎರಡು ಮೂರು ವರ್ಷದಿಂದ ಸಕ್ಕರೆ ಇಳುವರಿಯನ್ನು ಕಡಿಮೆ ತೋರುತ್ತಿರುವುದರಿಂದ ಕಬ್ಬಿನ ಎಫ್  ಆರ್ ಪಿ ದರದಲ್ಲಿಯೂ ರೈತರಿಗೆ ಮೋಸವಾಗುತಿದೆ. ಪ್ರಸಕ್ತ ಸಾಲಿನಲ್ಲಿ ನಿಗದಿಮಾಡಿರುವ  ಎಫ್ ಆರ್ ಪಿ ದರ ಆವೈಜ್ಞಾನಿಕವಾಗಿದೆ. ಆದ್ದರಿಂದ ಪ್ರಸಕ್ತ ಸಾಲಿನ ಕಬ್ಬಿನ ಬೆಲೆಯನ್ನು ರಾಜ್ಯ ಸರ್ಕಾರ ಟನ್ಗೆ 3,300 ನಿಗದಿ ಮಾಡಲಿ ಎಂದು ಆಗ್ರಹಿಸಿದರು.

key words : central-government-declare-national-disaster-state-Farmer-leader-Kuruburu Shanthakumar