ವಿಟಿಯು ನಿರ್ಧಾರಕ್ಕೆ ವಿದ್ಯಾರ್ಥಿಗಳ ಅಸಮಾಧಾನ: ಪರೀಕ್ಷೆ ಮುಂದೂಡುವಂತೆ ಸರ್ಕಾರಕ್ಕೆ ಮನವಿ…

ಮೈಸೂರು ,ಏಪ್ರಿಲ್,26,2021(www.justkannada.in):  ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಟಿಯು ಪರೀಕ್ಷೆ ನಡೆಸುವ ನಿರ್ಧಾರ ಮಾಡಿರುವ ಹಿನ್ನೆಲೆ ವಿಟಿಯು ನಿರ್ಧಾರಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ  ಮಾಡಿದ್ದಾರೆ.jk

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು  ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಕೋವಿಡ್ ಹಿನ್ನೆಲೆ‌ ಎಲ್ಲಾ ವಿವಿಗಳ ಪರೀಕ್ಷೆ ಮುಂದೂಡಲಾಗಿದೆ. ಆದರೆ ವಿಟಿಯು ನ ಎಂಬಿಎ, ಎಂಟೆಕ್ ,ಎಂಸಿಎ  ಪರೀಕ್ಷೆ ಗಳನ್ನು ಮೇ 3 ರಿಂದ ಪರೀಕ್ಷೆ ಆರಂಭವಾಗುತ್ತದೆ. ಹೀಗಾಗಿ ವಿಟಿಯುನ ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.

ಕೋವಿಡ್ ಎರಡನೇ ಅಲೆ ಇರುವುದರಂದ ಪರೀಕ್ಷೆಗಳನ್ನ ಮುಂದೂಡಬೇಕು. ನಮಗೂ ಜೀವ ಭಯ ಇಲ್ಲವೆ. ಈಗಾಗಲೆ ಎಲ್ಲಾ ಕಾಲೆಜುಗಳಲ್ಲಿ ಹಾಸ್ಟೆಲ್ ಖಾಲಿ ಮಾಡಿಸಿದ್ದಾರೆ.. ಪರೀಕ್ಷೆ ಬರೆಯುವವರು ಮತ್ತೆ ಹಾಸ್ಟೆಲ್ ಗೆ ಬರಬೇಕಾಗಿದೆ. ವಿಟಿಯುಗೆ ಬರುವ ಬಹುತೇಕ ವಿದ್ಯಾರ್ಥಿ ಹೊರಭಾಗದಿಂದ ಬರುತ್ತಾರೆ. ಟ್ರಾವಲ್ ಮಾಡಿ ಕೂಡ ಬರುತ್ತಾರೆ. ಅವರಲ್ಲಿ ಯಾರಿಗಾದರು ತೊಂದ್ರೆ ಆದ್ರೆ ಯಾರು ಹೊಣೆ.Engineering –students-' dissatisfaction – VTU- decision-postpone- exams

ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆದರೆ ಕೊರೊನಾ ಸೋಂಕು ವಿದ್ಯಾರ್ಥಿಗಳಿಗೂ ತಗುಲುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಇಲಾಖೆ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷೆ ನಡೆಸಲೇ ಬೇಕಿದ್ದರೆ ಆನ್‌ಲೈನ್ ಮೂಲಕ ನಡೆಸಿ. ಇಲ್ಲದಿದ್ದರೆ ಪರೀಕ್ಷೆಯನ್ನು ಮುಂದೂಡಿ ಎಂದು ವಿಟಿಯು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Key words: Engineering –students-‘ dissatisfaction – VTU- decision-postpone- exams