ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮೇ.19ರಿಂದ ನಾಮಪತ್ರ ಸಲ್ಲಿಕೆ ಆರಂಭ, ಅಕ್ರಮ ತಡೆಗೆ ಕ್ರಮ-ಚುನಾವಣಾಧಿಕಾರಿ ಪ್ರಕಾಶ್.

ಮೈಸೂರು,ಮೇ,17,2022(www.justkannada.in): ಜೂನ್ 13ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಗದಿಯಾಗಿದ್ದು, ಮೇ 19ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿಡಾ.ಜಿ.ಸಿ ಪ್ರಕಾಶ್ ತಿಳಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ  ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚುನಾವಣಾಧಿಕಾರಿ ಪ್ರಕಾಶ್ ನೇತೃತ್ವದಲ್ಲಿ ಸಭೆ ನಡೆಯಿತು.

ಓಟರ್ ಲಿಸ್ಟ್ ನಲ್ಲಿ ಸಾಕಷ್ಟು ನ್ಯೂನ್ಯತೆ ಇದೆ. ಸರಿಯಾದ ಅಡ್ರಸ್ ಇಲ್ಲ. ಜೊತೆಗೆ ಕಚೇರಿಗಳಿಂದಲೇ ಮತದಾರ ಪೋನ್ ನಂ ಲೀಕ್ ಆಗುತ್ತಿದೆ. ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ.  ಕೆಲವರು ಪೋನ್ ನಂಬರ್ ಪಡೆದುಕೊಂಡು ಇನ್ಶುರೆನ್ಸ್ ಹಾಗೂ ಗೂಗಲ್ ಪೇ ನಂಬರ್ ಕೆಳುವ ಮುಖಾಂತರ ಆಮೀಷ ಒಡ್ಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಮತದಾರ ಆಮೀಷ ಒಡ್ಡುತ್ತಿರವ ವ್ಯಕ್ತಿಗೆ ಚುನಾವಣೆ ಸ್ಪರ್ಧೆ ಅವಕಾಶ ನೀಡದಂತೆ ಬಿಜೆಪಿ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು . ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ  ಚುನಾವಣಾಧಿಕಾರಿ ಪ್ರಕಾಶ್ ಭರವಸೆ ನೀಡಿದರು.

ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಡಾ ಜಿ.ಸಿ ಪ್ರಕಾಶ್, ಮೇ 19ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 26 ನಾಮಪತ್ರಗಳನ್ನು ಸಲ್ಲಿಸಲು ಅಂತಿಮ ದಿನವಾಗಿದೆ. ಮೇ 27ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 30 ಅಂತಿಮ ದಿನವಾಗಿದೆ.

ಜೂನ್ 13ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ, ಜೂನ್ 15 ರಂದು ಮತಗಳ ಎಣಿಕಾ ಕಾರ್ಯ ನಡೆಯಲಿದ್ದು, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ನಿರ್ಮಿಸಲಾಗಿದ್ದು ಅಲ್ಲೆ ಮತ ಎಣಿಕೆ ಕಾರ್ಯ ನಡೆಯಲಿದೆ. ಅಕ್ರಮ ತಡೆಗೆ ಚುನಾವಣಾ ವೀಕ್ಷಕರ ನೇಮಕ ಮಾಡಲಾಗುವುದು. ಇದುವರೆಗೂ ಒಟ್ಟು 1,33,073 ಮಂದಿ ಮತದಾರರು ನೋಂದಾಯಿತರಿದ್ದಾರೆ. ಡಾ ಜಿ ಸಿ ಪ್ರಕಾಶ್ ಮಾಹಿತಿ ನೀಡಿದರು.

Key words: election – Southern-Graduate-constituency- Election -Commissioner-Prakash.