ಎಂಟು ತಿಂಗಳ ಬಳಿಕ ಕೋಲಾರದಲ್ಲಿ ಮತ್ತೆ ರೈಲು ಸಂಚಾರ ಆರಂಭ

ಕೋಲಾರ,ಡಿಸೆಂಬರ್,07,2020(www.justkannada.in) : ಲಾಕ್ ಡೌನ್ ನಂತರ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಎಂಟು ತಿಂಗಳ ಬಳಿಕ ಕೋಲಾರದಲ್ಲಿ ಮತ್ತೆ ಆರಂಭಿಸಲಾಗಿದೆ.logo-justkannada-mysoreಸೋಮವಾರದಿಂದ ರೈಲು ಸಂಚಾರಕ್ಕೆ ಕೋಲಾರದ ಕೆಜಿಎಫ್ ನಲ್ಲಿ ಚಾಲನೆ ನೀಡಲಾಗಿದೆ. ಕೊರೊನಾ ಕಾರಣವಾಗಿ ಲಾಕ್ ಡೌನ್ ವಿಧಿಸಿದ ನಂತರ ರೈಲು ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಸೋಮವಾರ ಸಂಚಾರವನ್ನು ಪುನರಾರಂಭಿಸಲಾಗಿದೆ.

ರೈಲು ವ್ಯವಸ್ಥೆಯಿಲ್ಲದ ಪ್ರಯಾಣಿಕರು ಪರದಾಡಿದ್ದರು

ಪ್ರತಿದಿನ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆಯಿಂದ ಬೆಂಗಳೂರಿಗೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. ರೈಲು ಪ್ರಯಾಣಿಕರಲ್ಲಿ ಹೆಚ್ಚಿನ ಮಂದಿ ಉದ್ಯೋಗಕ್ಕೆ ಹೋಗುವವರಾಗಿದ್ದು, ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಪರದಾಡುತ್ತಿದ್ದರು.

ಆರು ದಿನಗಳ ಕಾಲ ಡೆಮೋ ರೈಲು ಸಂಚಾರ

ಲಾಕ್ ಡೌನ್ ತೆರವಿನ ನಂತರ ಜನರು ಬಸ್ ನಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ, ರೈಲ್ವೆ ಸಚಿವಾಲಯಕ್ಕೆ ರೈಲು ಸಂಚಾರ ಪುನರಾರಂಭಿಸಲು ಮನವಿ ಮಾಡಿದ್ದರು. ಇದೀಗ ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ ಆರು ದಿನಗಳ ಕಾಲ ಡೆಮೋ ರೈಲು ಸಂಚಾರಕ್ಕೆ ಸಂಸದ ಮುನಿಸ್ವಾಮಿ ಚಾಲನೆ ನೀಡಿದ್ದಾರೆ.

ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಎಚ್ಚರಿಕೆ

ಬೆಳಿಗ್ಗೆ ಏಳು ಗಂಟೆಗೆ ಬೆಂಗಳೂರು ಮಾರ್ಗದ ರೈಲು ಹೊರಟಿದ್ದು, ಕೆಜಿಎಫ್-ಬಂಗಾರಪೇಟೆ-ಮಾಲೂರು-ವೈಟ್ ಫೀಲ್ಡ್-ಕಂಟೋನ್ಮೇಟ್-ಬೆಂಗಳೂರು ಕೇಂದ್ರ ಈ ಮಾರ್ಗದಲ್ಲಿ ರೈಲು ಸಂಚಲಿಸಲಿದೆ.

 Eight-months-later-Kolar-Train-again-Start-traffic

ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಎಚ್ಚರಿಕೆ ನೀಡಿದ್ದು, ಒಂದು ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಪ್ರಯಾಣ ಮಾಡಿದರೆ ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.

key words : Eight-months-later-Kolar-Train-again-Start-traffic