ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು : ಡಿಪಿಆರ್ ತಯಾರಿಸಲು ಅನುಮತಿಸಿದ ಸಚಿವ ರಮೇಶ್ ಜಾರಕಿಹೊಳಿ‌…

kannada t-shirts

ಬೆಳಗಾವಿ,ಆಗಸ್ಟ್, 29,2020(www.justkannada.in): ಬೆಳಗಾವಿ ಜಿಲ್ಲೆಗೆ 11 ಹೊಸ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ.jk-logo-justkannada-logo

ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ 11 ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆ ನಡೆಸಿ, ಈ ಯೋಜನೆಗಳಿಗೆ ಅವಶ್ಯವಿರುವ 9.91 ಟಿಎಂಸಿ ನೀರನ್ನು ಹಂಚಿಕೆ‌ ಮಾಡಲು ಸಹಾ ಅನುಮೋದನೆ ನೀಡಲಾಗಿದೆ.eighteen-irrigation-projects-belgavi-district-minister-ramesh-jarakiholi

ಹಾಗೆಯೇ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಅನುಷ್ಠಾನಕ್ಕೆ ತರಲಾಗುವ ವಿವಿಧ ಏಳು ನೀರಾವರಿ ಯೋಜನೆ ಗಳಿಗೂ ಸಹಾ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಭೆ ಅನುಮತಿ ನೀಡಿದೆ.

Key words: Eighteen- irrigation -projects –Belgavi –district-Minister- Ramesh jarakiholi

website developers in mysore