ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಆರೋಪಿಗಳ ಗಡಿಪಾರು ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ.

ಮಡಿಕೇರಿ,ಫೆಬ್ರವರಿ,2,2023(www.justkannada.in):  ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಗಡಿಪಾರು ಮಾಡಲು ಶಿಫಾರಸ್ಸು ಮಾಡಿರುವುದನ್ನ ಖಂಡಿಸಿ ಹಿಂದೂಪರ ಸಂಘಟನೆಗಳು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು, ಗಡಿಪಾರು ನೋಟಿಸ್​ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲೂ ಪ್ರತಿಭಟನೆ ನಡೆಯಿತು. ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಕವನ್ ಕಾವೇರಪ್ಪ, ವಿನಯ್ ಗಡಿಪಾರಿಗೆ ಪೊಲೀಸ್ ಇಲಾಖೆ ಶಿಫಾರಸು ಮಾಡಿದ ಹಿನ್ನಲೆ ಎಸಿ ಯತೀಶ್ ಉಲ್ಲಾಳ್ ಅವರು ಆರೋಪಿಗಳಿಗೆ ನಿನ್ನೆ ನೋಟಿಸ್ ಜಾರಿ ಮಾಡಿ ನಿಮನ್ನು ಯಾಕೆ‌ ಗಡಿ ಪಾರು ಮಾಡಬಾರದೆಂದು ಕಾರಣ ಕೇಳಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ಗಡಿಪಾರು ಖಂಡಿಸಿ ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಡಿಕೇರಿಯಲ್ಲಿ ನೆರೆಹಾನಿ ಪರಿಶೀಲನೆಗೆ ತೆರಳಿದ್ದ, ಸಿದ್ಧರಾಮಯ್ಯ ಅವರ ಕಾರಿಗೆ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ಭಾರೀ ಪ್ರತಿಭಟನೆ, ಆಕ್ರೋಶವನ್ನು ಎದುರಿಸಿದ್ದರು. ಇದೇ ವೇಳೆ ಅವರ ಕಾರಿಗೆ ಮೊಟ್ಟೆಯನ್ನು ಎಸೆಯಲಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು.

Key words: Egg-thrown – Siddaramaiah’s- car- case- Protest – Hindu organizations-madikeri