ಅನಧಿಕೃತ ಇಂಗ್ಲಿಷ್ ಶಾಲೆಯ ನೋಂದಣಿ ರದ್ದುಪಡಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ…

ಬೆಂಗಳೂರು,ಜೂ,11,2020(www.justkannada.in): ಅನಧಿಕೃತವಾಗಿ ಪ್ರಾರಂಭಿಸಿರುವ ಚೋಳೂರು ಪಾಳ್ಯದ ಬಳಿ ಇರುವ ಶ್ವೇತಾ ಪಬ್ಲಿಕ್ ಇಂಗ್ಲೀಷ್ ಶಾಲೆಯ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.

ಬೆಂಗಳೂರಿನ  ಚೋಳೂರು ಪಾಳ್ಯದ ಅನುದಾನಿತ ಕನ್ನಡ ಪ್ರೌಢಶಾಲೆಯ ಬಳಿ ಶ್ವೇತಾ ಪಬ್ಲಿಕ್ ಶಾಲೆ (ಸೇಂಟ್ ಮಿರಾಸ್ ಪಬ್ಲಿಕ್ ಶಾಲೆ) ಅನಧಿಕೃತವಾಗಿ ಆರಂಭವಾಗಿದೆ. ಇದರಿಂದಾಗಿ ಕನ್ನಡ ಶಾಲೆಗೆ ಧಕ್ಕೆಯಾಗಿದೆ . ಹೀಗಾಗಿ ಅನುಮತಿ ಇಲ್ಲದೇ ಪ್ರಾರಂಭವಾದ ಇಂಗ್ಲೀಷ್ ಶಾಲೆಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸಚಿವರಿಗೆ ಮನವಿ ಮಾಡಿದ್ದರು.education-minister-suresh-kumar-instruction-english-school

ಈ ಹಿನ್ನೆಲೆಯಲ್ಲಿ ಅನಧಿಕೃತ ಶ್ವೇತಾ ಪಬ್ಲಿಕ್ ಶಾಲೆಯ (ಸೇಂಟ್ ಮಿರಾಸ್ ಪಬ್ಲಿಕ್ ಶಾಲೆ)  ನೊಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್  ಸೂಚನೆ ನೀಡಿದ್ದಾರೆ.

Key words: Education –minister- Suresh kumar-instruction-English school