ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರಿಗೆ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್

kannada t-shirts

ಮೈಸೂರು: ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರು 2021ರ ಇಂಟರ್ ನ್ಯಾಷನಲ್ ಡಿಸ್ಟಿಂಗ್ವಿಶ್ಡ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ.

ಸೆಂಟರ್ ಫಾರ್ ಪ್ರೊಫೆಷನಲ್ ಅಡ್ವಾನ್ಸ್ಮೆಂಟ್ ಎಕ್ಸಿಕ್ಯುಟಿವ್ ಕೌನ್ಸಿಲ್ ಹಾಗೂ ಗ್ಲೋಬಲ್ ಆನ್ಯುವಲ್ ಎಜುಕೇಶನ್ ಅಂಡ್ ರಿಸರ್ಚ್ ಎಕ್ಸಲೆನ್ಸ್ ಅವಾರ್ಡ್- 2021 ಸಮಿತಿಯು ಪ್ರೊ.ಶಿವಪ್ಪ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ.

ವಿಜಯವಾಡದ ಸೆಂಟರ್ ಫಾರ್ ಪ್ರೊಫೆಷನಲ್ ಅಡ್ವಾನ್ಸ್ಮೆಂಟ್‌ನಲ್ಲಿ ಡಿ.18ರಂದು ಸಂಜೆ 5 ಗಂಟೆಗೆ ನಡೆಯಲಿರುವ ಜಾಗತಿಕ ವಾರ್ಷಿಕ ಶಿಕ್ಷಣ ಮತ್ತು ಸಂಶೋಧನಾ ಶೃಂಗಸಭೆ-2021 ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

website developers in mysore