ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ಕೋರ್ಟ್ ನಿಂದ ಅನುಮತಿ.

ನವದೆಹಲಿ,26,2022(www.justkannada.in):  ದುಬೈ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ದೆಹಲಿಯ ಇಡಿ ವಿಶೇಷ ಕೋರ್ಟ್ ಅನುಮತಿ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಇಡಿ ವಿಚಾರಣೆ ಎದುರಿಸಿದ್ದರು. ಈ ಮಧ್ಯೆ ದುಬೈಗೆ ತೆರಳಲು ಅನುಮತಿ ನೀಡುಂತೆ ಕೋರ್ಟ್ ಗೆ ಡಿಕೆ ಶಿವಕುಮಾರ್ ಮನವಿ ಸಲ್ಲಿಸಿದ್ದರು.

ಇದೀಗ  ಡಿಸೆಂಬರ್ 1ರಿಂದ 8ರವೆಗರೆ ದುಬೈಗೆ ತೆರಳಲು ಡಿ.ಕೆ ಶಿವಕುಮಾರ್ ಗೆ ಅನುಮತಿ ನೀಡಿ ನ್ಯಾಯಮೂರ್ತಿ ವಿಕಾಸ್ ಧೂಲ್ ಅವರು  ಆದೇಶಿಸಿದ್ದಾರೆ. ಡಿಸೆಂಬರ್ 1 ರಂದು ಡಿಕೆ ಶಿವಕುಮಾರ್ ದುಬೈಗೆ ತೆರಳಲಿದ್ದಾರೆ.

Key words: ED- Special Court – permission- DK Shivakumar – Dubai-tour