ಸಂಪೂರ್ಣ ನಾಡು ಆರ್ಥಿಕವಾಗಿ ಸಬಲವಾಗಬೇಕು:  ಬಡವರ ಕನಸು ನನಸು ಮಾಡುವುದೇ ನಮ್ಮ ಗುರಿ- ಸಿಎಂ ಬೊಮ್ಮಾಯಿ.

kannada t-shirts

ಬೆಂಗಳೂರು,ಮಾರ್ಚ್,20,2023(www.justkannada.in): ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ಸೂರು ಅವಶ್ಯಕ. ಸಂಪೂರ್ಣ ನಾಡು ಆರ್ಥಿಕವಾಗಿ ಸಬಲವಾಗಬೇಕು. ಆರ್ಥಿಕವಾಗಿ ಸಬಲರಾದರೇ ಮಾತ್ರ ನಾಡಕಟ್ಟಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಡವಾರಾಗಿ ಹುಟ್ಟಿದ ಮೇಲೆ ಬಡವರಾಗಿ ಸಾಯಬೇಕೆಂಬ ನಿಯಮವಿಲ್ಲ. ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ಸೂರು ಅವಶ್ಯಕ. ಸಂಪೂರ್ಣ ನಾಡು ಆರ್ಥಿಕವಾಗಿ ಸಬಲವಾಗಬೇಕು. ಸಬಲರಾದವರು ಮಾತ್ರ ನಾಡಕಟ್ಟಲು. ಅಶೋಕ್ ನೀಡಿರುವುದು ಕೇವಲ ಹಕ್ಕುಪತ್ರ ಅಲ್ಲ. ಮನಸ್ಸಿನ ನೆಮ್ಮದಿ. ಇದು  ಕೇವಲ ನಮ್ಮ ಕಾಯಕ ಅಲ್ಲ ನಮ್ಮ ಪುಣ್ಯ. 1 ಲಕ್ಷ 50 ಸಾವಿರಕ್ಕಿಂತ ಹೆಚ್ಚು ತಾಂಡಾ ಜನರಿಗೆ ಹಕ್ಕುಪತ್ರ  ವಿತರಿಸಿದ್ದೇವೆ ಎಂದರು.

ಬಡವರ ಕನಸನ್ನ ನನಸು ಮಾಡುವುದು ನಮ್ಮ ಗುರಿ.   ಜನರ ಕ್ಷೇಮಾಭಿವೃದ್ದಿಗಾಗಿ ನಾವು ರಾಜಕೀಯ ಮಾಡುತ್ತಿದ್ದೇವೆ. ಜನರಿಗೆ ಹತ್ತಿರವಾಗುವ ಯೋಜನೆಗಳನ್ನ ನೀಡಿದ್ದೇವೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ.   ಜಲಜೀವನ್ ಯೋಜನೆ ಮೂಲಕ ಪ್ರತಿಮನೆಗೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಬಡವರ ಮಕ್ಕಳು ಮುಂದೆ ಬರಬೇಕು ನಿಮ್ಮ ಮಕ್ಕಳು ಶಿಕ್ಷಣಪ ಡೆದು ಈ ವೇದಿಕೆಯಲ್ಲಿ ಕುಳಿತುಕೊಳ್ಳಬೇಕು. ಬದುಕಿನಲ್ಲಿಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಎಂದು ಕರೆ ನೀಡಿದರು.

Key words: economically –empowered- poor – CM-Basavaraj Bommai.

website developers in mysore