ಆರ್ಥಿಕ ಪುನಶ್ಚೇತನಕ್ಕೆ ಮಾಸ್ಟರ್ ಪ್ಲ್ಯಾನ್: ಇನ್ಮುಂದೆ ಮೈಸೂರು ಮೇಯರ್, ಪಾಲಿಕೆ ಸದಸ್ಯರ ನೇತೃತ್ವದಲ್ಲೇ ತೆರಿಗೆ ಸಂಗ್ರಹ…

ಮೈಸೂರು,ಅಕ್ಟೋಬರ್,11,2020(www.justkannada.in): ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಾಗಾಗಿರುವ ಮೈಸೂರು ಮಹಾನಗರ ಪಾಲಿಕೆ ಇದೀಗ ಆರ್ಥಿಕ ಪುನಶ್ಚೇತನಕ್ಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.jk-logo-justkannada-logo

ಸ್ವಂತ ನಿರ್ವಹಣೆಯ ಸಂಕಷ್ಟಕ್ಕೆ ಒಳಾಗಾಗಿರುವ ಮೈಸೂರು ಮಹಾನಗರ ಪಾಲಿಕೆಯ ಪುನಶ್ಚೇತನಕ್ಕೆ ಕಡ್ಡಾಯ ತೆರಿಗೆ ಸಂಗ್ರಹ ಮಾಡಲು ಮೇಯರ್, ಪಾಲಿಕೆ ಸದಸ್ಯರು ಮುಂದಾಗಿದ್ದಾರೆ. ಹೀಗಾಗಿ ಇನ್ಮುಂದೆ ಮೇಯರ್, ಪಾಲಿಕೆ ಸದಸ್ಯರ ನೇತೃತ್ವದಲ್ಲೇ ತೆರಿಗೆ ವಸೂಲಿ ನಡೆಯಲಿದೆ.economic-recovery-mysore-city-corporation-tax-collection-mayor-member

ಈ ಕುರಿತು ಮಾತನಾಡಿರುವ ಮೇಯರ್ ತಸ್ನೀಂ, ನಾಳೆಯಿಂದ ಎಲ್ಲಾ ಅಧಿಕಾರಿಗಳು ಮತ್ತು ಸದಸ್ಯರು ಒಟ್ಟಾಗಿ 15 ದಿನ ತೆರಿಗೆ ಸಂಗ್ರಹ ಮಾಡಲಿದ್ದೇವೆ. ಬೆಳಿಗ್ಗೆ 9 ರಿಂದ ಸಂಜೆ 9 ರವರೆಗೆ ತೆರಿಗೆ ಸಂಗ್ರಹ ಮಾಡಲಿದ್ದೇವೆ. ತೆರಿಗೆ ಬಾಕಿ ಇರುವ ಮನೆಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲಾ ಕಡೆ ತೆರಿಗೆ ಸಂಗ್ರಹ ಮಾಡಲಾಗುವುದು. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲೂ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Key words: Economic Recovery-mysore city corporation-Tax collection – Mayor- Member.