ಸೂರ್ಯಗ್ರಹಣ ಹಿನ್ನೆಲೆ: ನಾಳೆ ಬೆಳಿಗ್ಗೆ ಭಕ್ತರಿಗೆ ತಾಯಿ ಚಾಮುಂಡೇಶ್ವರಿ ದರ್ಶನ ಇರುವುದಿಲ್ಲ….

ಮೈಸೂರು,ಡಿ,25,2019(www.justkannada.in):  ನಾಳೆ ಕಂಕಣ ಸೂರ್ಯಗ್ರಹಣ ಗೋಚರವಾಗುವ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಳೆ ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿರುವುದಿಲ್ಲ.

ನಾಳೆ ಬೆಳಿಗ್ಗೆ 8.30ರಿಂದ 11.20ರವರೆಗೆ ಸೂರ್ಯಗ್ರಹಣವಿದೆ. ಹೀಗಾಗಿ ಈ ವೇಳೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ. ಮತ್ತು ಶುದ್ದೀಕರಣ ನಡೆಯಲಿದೆ.   ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆಯಲಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 1ಗಂಟೆವರೆಗೆ ಭಕ್ತರಿಗೆ ದೇವಿ ದರ್ಶನ ಇರುವುದಿಲ್ಲ ಎಂದು ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ  ತಿಳಿಸಿದೆ.

ಸೂರ್ಯಗ್ರಹಣದ ಬಳಿಕ ಅಂದರೇ 1 ಗಂಟೆಯ ನಂತರ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ ಅವಕಾಶವಿರಲಿದೆ. ಮಧ್ಯಾಹ್ನ 1 ಗಂಟೆಯ ನಂತರ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Key words:  eclipse –mysore- Tomorrow -morning -devotees – thayi Chamundeshwari