ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಈ.ಸಿ. ನಿಂಗರಾಜ್‌ ಗೌಡ ಅವರ ಆಯ್ಕೆಗೆ ಒತ್ತಾಯ…

ಮಂಡ್ಯ,ಮಾರ್ಚ್,1,2021(www.justkannada.in):  ಮುಂಬರುವ ವಿಧಾನಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್‌ ಗೌಡ ಅವರನ್ನು ವರಿಷ್ಠರು ಆಯ್ಕೆ ಮಾಡಲಿ ಎಂದು ಉಪನ್ಯಾಸಕ ರಾಜುಸ್ವಾಮಿ ಒತ್ತಾಯಿಸಿದರು.jk

ನಗರದ ಸ್ಪೊರ್ಟ್ಸ್ ಸಂಸ್ಥೆಯ ಸಭಾಂಗಣದಲ್ಲಿ ಡಾ. ಈ.ಸಿ. ನಿಂಗರಾಜ್‌ ಗೌಡ ಸ್ನೇಹಬಳಗ ಆಯೋಜಿಸಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿ ಡಾ. ಈ.ಸಿ. ನಿಂಗರಾಜ್‌ ಗೌಡ ಅವರ ಸ್ನೇಹಬಳಗದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಡಿದರು.

2022 ರಂದು ನಡೆಯುವ ವಿಧಾನಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜನಪರ ಕಾಳಜಿಯುಳ್ಳ ಡಾ.ಈ.ಸಿ. ನಿಂಗರಾಜ್‌ಗೌಡ ಅವರನ್ನು ಬಿಜೆಪಿ ವರಿಷ್ಠರು ಆಯ್ಕೆಮಾಡಿ, ಗೆಲುವಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಪದವೀದರ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ಜನಸಂಪರ್ಕ ಸಂಪಾಧಿಸಿರುವ ಡಾ.ಈ.ಸಿ. ನಿಂಗರಾಜ್‌ಗೌಡ ಅವರು, ಪದವೀಧರ ಕ್ಷೇತ್ರದಲ್ಲಿ ಸೇವೆ ಮಾಡಲು ಎಲ್ಲರೂ ಒಮ್ಮತದಿಂದ ನಿರ್ಧರಿಸಿದ್ದೇವೆ, ಹೊಸ ಪ್ರತಿಭಾವಂತರನ್ನು ವಿಧಾನಪರಿಷತ್ತಿನಲ್ಲಿ ಕೂರಿಸುವ ಸದುದ್ದೇಶ ಪದವೀಧರರದ್ದಾಗಲಿ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ದಕ್ಷಿಣ ಪದವೀಧರ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್‌ಗೌಡ ಅವರು, ಕ್ಷೇತ್ರ ವ್ಯಾಪ್ತಿ ಮತದಾರರಾಗಿದ್ದರೂ ಮುಂದಿನ ವರ್ಷ ನಡೆಯುವ ಚುನಾವಣೆಗೆ ಹೊಸದಾಗಿ ಎನ್.ರೋಲ್‌ ಮೆಂಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ದಕ್ಷಿಣ ಪದವೀದರ ಕ್ಷೇತ್ರದ ಮೈಸೂರು-ಮಂಡ್ಯ-ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಾಸಮಾಡುತ್ತಿರುವ ಎಲ್ಲಾ ಪದವೀಧರರು ತಮ್ಮ ಹೆಸರನ್ನು ನೋಂದಾಯಿಸಿಕೊAಡರೆ ಮರುಕ್ಷಣದಿಂದಲೇ ಮತದಾರರಾಗುತ್ತಾರೆ ಎಂದು ಹೇಳಿದರು.

ಪದವೀಧರರು ನೋಂದಣಿಗಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ, ವಾಸಸ್ಧಳದ ಚುಣಾವಣಾ ಗುರುತಿನ ಚೀಟಿ, ಆಧಾರ್ ಚೀಟಿಯ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕಿದೆ ಎಂದರು.

ಪದವೀಧರ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು ಮತ್ತು ಹಕ್ಕೊತ್ತಾಯಗಳನ್ನು ವಿಧಾನಪರಿಷತ್ತಿನಲ್ಲಿ ಚರ್ಚಿಸಿ ನ್ಯಾಯಕೊಡಿಸುವ ಸೇವಾ ಹಂಬಲದಲ್ಲಿದ್ದೇವೆ, ಪದವೀಧರ ಮತದಾರರು ನಮ್ಮಂತಹ ಹೊಸ ಆಲೋಚನೆಯುಳ್ಳ ಅಭ್ಯರ್ಥಿಯನ್ನು ಆಯ್ಕೆಮಾಡಿ ಎಂದು ಮನವಿ ಮಾಡಿದರು.ec-ningaraj-gowda-bjp-candidate-selection-legislative-council-election

ಪೂರ್ವಭಾವಿಸಭೆಯಲ್ಲಿ ಸ್ನೇಹ ಬಳಗದ ಶಂಭುಲಿಂಗೇಗೌಡ, ಅರುಣ ಆರಾಧ್ಯ, ಡಾ, ನರಸಿಂಹಸ್ವಾಮಿ, ಪಂಚಾಕ್ಷರಿ ಗಂಗಾಡ್ಕರ್, ಕಲಾವಿದರಾದ ಡಾ. ಶಂಕರಪ್ಪ, ವಿನೋದ್‌ ಕುಮಾರ್, ಅನಿಲ್‌ಕುಮಾರ್, ಮುದ್ದಯ್ಯ, ಡಿ. ಶ್ರೀಕಂಠೇಗೌಡ, ಬಿ.ಮಂಜುನಾಥ್, ಲೋಹಿತ್‌ಕುಮಾರ್ ಮತ್ತಿತರರಿದ್ದರು.

ಮಂಡ್ಯ ನಗರದ ಸ್ಪೊರ್ಟ್ಸ್ ಸಂಸ್ಥೆಯ ಸಭಾಂಗಣದಲ್ಲಿ ಡಾ. ಈ.ಸಿ. ನಿಂಗರಾಜ್‌ಗೌಡ ಸ್ನೇಹಬಳಗ ಆಯೋಜಿಸಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿ ಡಾ. ಈ.ಸಿ. ನಿಂಗರಾಜ್‌ ಗೌಡ ಅವರ ಸ್ನೇಹಬಳಗದ ಪೂರ್ವಭಾವಿ ಸಭೆಯಲ್ಲಿ ಉಪನ್ಯಾಸಕ ರಾಜುಸ್ವಾಮಿ ಮಾತನಾಡಿದರು.

ಮಂಡ್ಯ ನಗರದ ಸ್ಪೊರ್ಟ್ಸ್ ಸಂಸ್ಥೆಯ ಸಭಾಂಗಣದಲ್ಲಿ ಡಾ. ಈ.ಸಿ. ನಿಂಗರಾಜ್‌ ಗೌಡ ಸ್ನೇಹಬಳಗ ಆಯೋಜಿಸಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿ ಡಾ. ಈ.ಸಿ. ನಿಂಗರಾಜ್‌ಗೌಡ ಅವರ ಸ್ನೇಹಬಳಗದ ಪೂರ್ವಭಾವಿ ಸಭೆಯಲ್ಲಿ ಗಣ್ಯರು ಅಭಿನಂದಿಸಿದರು.

Key words:  EC Ningaraj gowda- BJP candidate –selection-legislative council-election