ಇಂದು ಬೆಳ್ಳಂಬೆಳಗ್ಗೆ ಮಣಿಪುರದಲ್ಲಿ ಭೂಕಂಪನ

ಬೆಂಗಳೂರು, ಮೇ 23, 2021 (www.justkannada.in): ಮಣಿಪುರದ ಉಕ್ರುಲ್ ನಲ್ಲಿ ಭೂಕಂಪನ ಸಂಭವಿಸಿದೆ.

ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪನ  ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲಾಗಿದೆ.

ಈ ಸಂಬಂಧ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ 6.56 ಸಮಯದಲ್ಲಿ ಮಣಿಪುರದ ಉಕ್ರುಲ್ ನಲ್ಲಿ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.

109 ಕಿ.ಮೀ ಆಳದಲ್ಲಿ ಉಕ್ರುಲ್ ನ ಪೂರ್ವ-ಆಗ್ನೇಯಕ್ಕೆ 49 ಕಿ.ಮೀ ಭೂಕಂಪ ಸಂಭವಿಸಿದೆ. ಕೊರೊನಾ ಸಂಕಷ್ಟದ ನಡುವೆ ಭೂ ಕಂಪನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.