ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಮಕ್ಕಳಿಗೆ ಇ – ವಿಶೇಷ ಶಿಬಿರ ಮತ್ತು ಉಚಿತ ಗೂಗಲ್ ನೆಸ್ಟ್ ಮಿನಿ ಡ್ರೈವ್ ವಿತರಣೆ…

ಮೈಸೂರು,ಆ,6,2020(www.justkannada.in):   ಕೊರೋನಾ ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಮಕ್ಕಳಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಇ – ವಿಶೇಷ ಶಿಬಿರ ಮತ್ತು ಉಚಿತ ಗೂಗಲ್ ನೆಸ್ಟ್ ಮಿನಿ ಡ್ರೈವ್ ವಿತರಣೆ ಮಾಡಲಾಯಿತು.jk-logo-justkannada-logo

ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಗೂಗಲ್ ಸಹಯೋಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹದೇವ ಪ್ರಸಾದ್ ಮೂಲಕ ಆರೋಗ್ಯ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ ವಿತರಣೆ  ಮಾಡಲಾಯಿತು.  ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯಲ್ಲೂ ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಮುಂಚೂಣಿಯಲ್ಲಿ  ಕಾರ್ವನಿರ್ವಹಿಸುತ್ತಿರುವ ಹಿನ್ನೆಲೆಕೆಲಸದ ಒತ್ತಡದ ನಡುವೆ ವೈದ್ಯಕೀಯ ಸಿಬ್ಬಂದಿ ತಮ್ಮ ಕುಟುಂಬಕ್ಕೆ ಸಮಯ ಮೀಸಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.  ಹೀಗಾಗಿ ಅಂತಹ ಸಿಬ್ಬಂದಿ ಮಕ್ಕಳಿಗೆ ವಿಶೇಷ ಕಲಿಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಗೂಗಲ್ ಮಿನಿ ಡ್ರೈವ್ ಉಪಕರಣ ವಿತರಿಸಿದೆ.e-specialty-camp-children-government-medical-staff-free-google-nest-mini-drive-delivery

ವಸ್ತು ಪ್ರದರ್ಶನ ಪ್ರಾಧಿಕಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಎಂ. ಶಿವರಾಜು, ಸಿದ್ದರೂಢ ಸೇರಿದಂತೆ ಆರೋಗ್ಯಾಧಿಕಾರಿಗಳು ಭಾಗಿಯಾಗಿದ್ದರು.

Key words: E-specialty camp – children -government -medical staff – free Google Nest Mini- Drive delivery.